ಸ್ವಾಮಿ ವಿವೇಕಾನಂದ ಧ್ಯಾನ ಮಂದಿರ 4ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮ

ಸ್ವಾಮಿ ವಿವೇಕಾನಂದ ಧ್ಯಾನ ಮಂದಿರ 4ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮ A special satsang program was held as part of the 4th anniversary of Swami Vivekananda Dhyana Mandir

ರಾಯಬಾಗ 08 :  ಧ್ಯಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗಗಳನ್ನು ಮನುಷ್ಯ ಸರಿಯಾಗಿ ಬಳಸಿಕೊಂಡು ಒಳ್ಳೆಯ ವ್ಯಕ್ತಿತ್ವದಿಂದ ಬೆಳೆಸಿಕೊಳ್ಳಬೇಕೆಂದು ದಾವಣಗೆರೆಯ ರಾಮಕೃಷ್ಣ ಮಿಷನದ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜರು ಹೇಳಿದರು. ಭಾನುವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನದಲ್ಲಿ ಸ್ವಾಮಿ ವಿವೇಕಾನಂದ ಧ್ಯಾನ ಮಂದಿರದ 4ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮದ ಬೇಲಿ ಸಂಸ್ಕಾರ, ಸಂಸ್ಕೃತಿ ಬೆಳವಣಿಗೆಯಾಗುವವರೆಗೂ ಇರಬೇಕು, ನಂತರ ಮನುಷ್ಯ ಸಜ್ಜನರ ಸಂಘ ಮಾಡುತ್ತಾ ಜ್ಞಾನಿಯಾಗಬೇಕು. ರಾಮಕೃಷ್ಣ ಪರಮಹಂಸರು ಕಠೋರ ತಪಸ್ಸನ್ನು ಮಾಡಿ ಸರ್ವ ಧರ್ಮ ಸಮನ್ವಯತೆ ಸಾಧಿಸಿದ್ದರು.

ಸಮಾಜವನ್ನು ಬೌದ್ಧಿಕವಾಗಿ ಶಾರೀರಿಕವಾಗಿ ಸದೃಢವಾಗಿರಲು ಶ್ರಮಿಸಿದವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.ಬೆಳಗಾವಿ ರಾಮಕೃಷ್ಣ ಮಿಷನ ಅಶ್ರಮ ಸ್ವಾಮಿ  ನವದುರ್ಗಾನಂದಜೀ ಮಹಾರಾಜರು  ಮಾತನಾಡಿದರು. ಗೋಕಾಕದ ಓಂಕಾರ ಪತ್ತಾರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸ್ವಾಮಿ ವಿವೇಕಾನಂದ ಧ್ಯಾನಮಂದಿರ ಸಂಸ್ಥಾಪಕ  ತಾನಾಜಿ ಶಿರಗುಪ್ಪಿ, ಡಿ.ಎಸ್‌.ನಾಯಿಕ, ಬಿ.ಎಸ್‌. ಗಡ್ಡೆ, ರಾಜೇಶ ಪೈ, ಶಿವಪುತ್ರ ಅಮರಶೆಟ್ಟಿ, ಆರ್‌.ಎಚ್‌.ಗೊಂಡೆ, ಎಸ್‌.ಟಿ.ಧನೊಡೆ, ಡಾ.ಆನಂದ ತೋರೊ,  ಆನಂದ ದೇಶಪಾಂಡೆ, ಅಮೋಘ ನಾಯಿಕ, ಪಿ.ಬಿ.ಮುನ್ಯಾಳ, ಅಪ್ಪಾಜಿ ಪುಜಾರಿ ಸೇರಿ ಅನೇಕರು ಇದ್ದರು. ಸ್ಮಿತಾ ಪೈ ಸ್ವಾಗತಿಸಿದರು,  ರಾಜಶ್ರೀ ಟೆಂಗಿನಕಾಯಿ ನಿರೂಪಿಸಿ, ವಂದಿಸಿದರು.