ತಾಳಿಕೋಟಿ ಸಹಕಾರಿ ಬ್ಯಾಂಕ್‌ಗೆ 67ನೇ ವಾರ್ಷಿಕ ಸಭೆ

ತಾಳಿಕೋಟಿ ಸಹಕಾರಿ ಬ್ಯಾಂಕ್‌ಗೆ 67ನೇ ವಾರ್ಷಿಕ ಸಭೆ  67th Annual Meeting of Talikoti Cooperative Bank

ಲೋಕದರ್ಶನ ವರದಿ 

ತಾಳಿಕೋಟಿ  03: ಪಟ್ಟಣದ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್‌ನ 67ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೋಮವಾರ ಅಡತ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಯಿತು.  ಗುಂಡಕನಾಳ ಬ್ರಹನ್ ಮಠದ ಪರಮಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಬ್ಯಾಂಕ್‌ನ ಬೆಳವಣಿಗೆಗೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ವಿಶ್ವಾಸವೇ ಪ್ರಮುಖ ಕಾರಣ ಎಂದು ಹೇಳಿದರು.  

ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್‌. ಪಾಟೀಲ ಯಾಳಗಿ ಮಾತನಾಡಿ, ಹಿರಿಯರ ಶ್ರಮದಿಂದ ಬೆಳೆದ ಬ್ಯಾಂಕ್‌ನ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಸದಸ್ಯರ ಮರಣೋತ್ತರ ಸಹಾಯ ನಿಧಿಯನ್ನು ?2 ಸಾವಿರದಿಂದ ?5 ಸಾವಿರಕ್ಕೆ ಹೆಚ್ಚಿಸುವಂತೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡುವಂತೆ ಸಲಹೆ ನೀಡಿದರು. 

ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ ಮಾತನಾಡಿ, ಬ್ಯಾಂಕ್‌ಗೆ 10,676 ಸದಸ್ಯರಿದ್ದು, ?610 ಲಕ್ಷ ಷೇರು ಬಂಡವಾಳ, ?22,228.14 ಲಕ್ಷ ಠೇವಣಿಗಳು ಹಾಗೂ ?254.48 ಲಕ್ಷ ದುಡಿಯುವ ಬಂಡವಾಳವಿದೆ. 2025ಹಿ26್ಫೂ ಸಾಲಿನಲ್ಲಿ ?457.01 ಲಕ್ಷ ಲಾಭ ಗಳಿಸಿದ್ದು, ಮೂರು ಶಾಖೆಗಳೂ ಉತ್ತಮ ಸಾಧನೆ ಮಾಡಿವೆ ಎಂದು ತಿಳಿಸಿದರು.  

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.  ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿ.ಕೆ. ಮಣ್ಣೂರ ವರದಿ ವಾಚಿಸಿದರು. ಸಹಾಯಕ ವ್ಯವಸ್ಥಾಪಕ ಎಸ್‌.ಬಿ. ದೇಶಾಯಿ ಸ್ವಾಗತಿಸಿದರು. ಮಿಂಜಗಿ ಶಾಖೆ ವ್ಯವಸ್ಥಾಪಕ ಆರ್‌.ಎಸ್‌. ಬಿರಾದಾರ ನಿರೂಪಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.