ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು

ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು

ಸಂಕೇಶ್ವರ : ಮಂಗಳವಾರ ರಾತ್ರಿ ಸುರಿದ ಅನೆಕಲ್ಲು ಮಿಶ್ರಿತ ಮಳೆ ಗಾಳಿಯ ರಭಸದಿಂದ ಬಡಪಾಯಿ ಕುರಿಗಾಯಿಗೆ ಸೇರಿದ ಲಕ್ಷಾಂತರ ಮೌಲ್ಯದ 39 ಕುರಿಗಳು ಮೃತಪಟ್ಟಿದ್ದು, ಮಳೆಯ ಅಬ್ಬರಕ್ಕೆ ಬಡವನ ಬದುಕು ಬೀದಿಗೆ ಬಂದತಾಗಿದೆ. 

    ಸಂಕೇಶ್ವರದ ಬಡ ಕುರಿಗಾಯಿ ಶಂಕರ ಕರಜಗಿ ಎನ್ನುವರಿಗೆ ಸೇರಿದ 39 ಕುರಿಗಳನ್ನು ಸಂತೋಷ ಮುಡಸಿ ಅವರ ಹೊಲದಲ್ಲಿ ಹಾಕಲಾದ ಕುರಿಗಳ ದಡ್ಡಿಯಲ್ಲಿ ನಿಲ್ಲಿಸಲಾಗಿತ್ತು. 

   ಆದರೆ ಮಂಗಳವಾರ ರಾತ್ರಿ ಸುರಿದ ಅನೆಕಲ್ಲು ಮಿಶ್ರಿತ ಭಾರಿ ಮಳೆ ಗಾಳಿಗೆ 39 ಕುರಿಗಳ ಮೃತಪಟ್ಟಿವೆ. ಕುರಿಗಳ ಸಾಕಾಣಿಕೆ ಮೇಲೆ ಉಪಜೀವನವನ್ನು ಸಾಗಿಸುತ್ತಿದ್ದ ಶಂಕರ ಕರಜಗಿ ಅವರ ಬದುಕು ಈಗ ಬೀದಿಗೆ ಬಂದತಾಗಿದೆ.

   ಘಟನಾ ಸ್ಥಳಕ್ಕೆ ಸಂಕೇಶ್ವರ ಗ್ರಾಮ ಆಡಳಿತಾಧಿಕಾರಿ ಎನ್.ಆರ್.ಪಾಟೀಲ ಪಶುವೈದ್ಯರು, ಗ್ರಾಮಸಹಾಯಕ ರಶೀದ್ ನನ್ನುಭಾಯಿ, ಹಾಲುಮತ ಸಮಾಜದ ಮುಖಂಡ ಗಜಾನನ ಕ್ವಳ್ಳಿ ಸೇರಿದಂತೆ ಅನೇಕರು ಭೇಟಿ ನೀಡಿದರು. 

ಸುದ್ದಿ ಓದಿ