ವಿಶ್ವ ಶೌಚಾಲಯ ದಿನಾಚರಣೆ
ಲೋಕದರ್ಶನ ವರದಿ
ಹಾವೇರಿ15: ಅಗಡಿ ಗ್ರಾಮ ಪಂಚಾಯತಿಯ ಅಗಡಿ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆಯನ್ನು ಶಾಲಾ ಮಕ್ಕಳಿಂದ ಜಾತಾ ಹಾಗೂ ಸ್ವಚ್ಚತಾ ಘೋಷಣೆಗಳ ಮೂಲಕ ಕಾರ್ಯಕ್ರಮ ಪ್ರಾರಂಭಿಸಿಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಕೊಟ್ರೇಶಪ್ಪ ಬಸೇಗಣ್ಣಿಯವರು ಮಾತನಾಡಿ ಮಕ್ಕಳ ಮೂಲಕ ಸ್ವಚ್ಚತೆಯ ಅರಿವು ಮನೆ ಮನೆಗೂ ಪ್ರಸಾರವಾಗಬೇಕೆಂದು ತಿಳಿಸಿದರು. ಹಾಗೆಯೇ ಮಾತನಾಡಿ ಕುಟುಂಬದ ಗೌರವಕ್ಕಾಗಿ ಶೌಚಾಲಯ ಬಳಸಿರಿ ಮತ್ತು ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇದೆ ಎಂದು ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ.ಪಿ.ಎನ್ ಹುಬ್ಬಳ್ಳಿ, ತಾಲೂಕ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಜನಪ್ರತಿನಿಧಿಗಳು, ತಾಲೂಕ ಮಟ್ಟದ ವಿವಿಧ ಇಲಾಖೆಯವರು, ಶಾಲಾ ಶಿಕ್ಷಕ ವೃಂದದವರು, ಆಶಾ ಕಾರ್ಯಕತರ್ೆಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಭಾಗವಹಿಸಿದ್ದರು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಕುಮಾರಿ ಮಾಲಾಶ್ರೀ ಬಿ ಕೆಂಚನಗೌಡ್ರ ನಿರೂಪಿಸಿದರು ಎಸ್ ಬಿ ಎಣ್ಣಿ ದ್ವಿ, ದ,ಲೆಕ್ಕ ಸಹಾಯಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 