ಧಾರವಾಡ 09: ಉರ್ದು ಶಾಲೆಯ ಶಿಕ್ಷಕರು ಒಂದೇ ಸಮುದಾಯದ ಒಂದೇ ಮಾತೃಭಾಷೆಯಾಡುವ ಕುಟುಂಬದಿಂದ ಬಂದಿರುವ ಮಕ್ಕಳಿಗೆ ಬೋಧಿಸುತ್ತಿರುವುದರಿಂದ ಉರ್ದು ಶಿಕ್ಷಕರಿಗೆ ವರದಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಎ ಖಾಜಿಯವರು ಹೇಳಿದರು.
ದಿ.06ರಂದು ಧಾರವಾಡ ಶಹರ ವಲಯದ ಉರ್ದು ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆದರೆ ಶಿಕ್ಷಕರಲ್ಲಿ ಶಿಸ್ತುಬದ್ಧತೆ, ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಗುಣಾತ್ಮಕ ಶಿಕ್ಷಣ ಇವುಗಳ ಕೊರತೆ ಎದ್ದು ಕಾಣುತ್ತದೆ ಎನ್ನುವುದು ಶಾಲೆಗಳನ್ನು ಸಂದರ್ಶನ ನೀಡಿದಾಗ ಹಿರಿಯ ಅಧಿಕಾರಿಗಳು ಹಾಗೂ ಶೈಕ್ಷಣಿಕ ಮೇಲ್ವಿಚಾರಕರ ಒಟ್ಟಾರೆ ಅಭಿಪ್ರಾಯವಾಗಿದೆ. ಅದಾಗ್ಯೂ ಕಡಿಮೆ ಮಕ್ಕಳು ಇರುವ ಇಂತಹ ಶಾಲೆಗಳಲ್ಲಿ ಶೇ 100 ರಷ್ಟು ಕಲಿಕೆ ಸಾಧಿಸಬೇಕೆಂದು ಇಲಾಖೆಯು ಆಶಿಸುತ್ತಿದೆ.
ಇಂತಹ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವ ಅವಶ್ಯಕತೆ ಇದೆ. ಇದಕ್ಕಾಗಿ ಇಲಾಖೆಯು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಸೂಕ್ತ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಉದರ್ು ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾದರೆ ಒಂದು ಉತ್ತಮ ಸಮಾಜ ನಿರ್ಮಾ ಣವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಹೆಚ್ಪಿಯುಎಸ್ ಹತ್ತಿಕೊಳ್ಳ ಶಾಲೆಯ ಮಕ್ಕಳು ಪ್ರಾರ್ಥನೆ ಮಾಡಿದರು. ಉದರ್ು ಸಿಆರ್ಪಿಯವರು, ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.