ಭಗವದ್ಗೀತೆಯ 18 ಅಧ್ಯಾಯಗಳ ಅನಾವರಣ: ಗಮನ ಸೆಳೆದ ಕಾರ್ಯಕ್ರಮ

Unveiling of 18 chapters of the Bhagavad Gita: An eye-catching event

ಮಹಾಲಿಂಗಪುರ 06: ಪುಟ್ಟ ಪುಟ್ಟ ಮಕ್ಕಳು ಶ್ರೀಕೃಷ್ಣ ಪರಮಾತ್ಮ ಮತ್ತು ಇನ್ನಿತರೆ ವೇಷಗಳನ್ನು ಧರಿಸಿ ತಮ್ಮ ತೊದಲು ನುಡಿಯಿಂದ ಭಗವದ್ಗೀತೆಯ 18 ಅಧ್ಯಾಯಗಳ ಶ್ಲೋಕ, ಸಾರವನ್ನು ಆಂಗ್ಲ ಭಾಷೆ, ಕನ್ನಡ, ಸಂಸ್ಕೃತದಲ್ಲಿ ಪ್ರಸ್ತುತಪಡಿಸಿ ನಮ್ಮ ಭಗವದ್ಗೀತೆಯ ಮೌಲ್ಯ ಮತ್ತು ಭಾರತೀಯ ಸನಾತನ ಸಂಸ್ಕೃತಿಯ ಸಂಸ್ಕಾರ ಸಾರವನ್ನು ಬಿತ್ತರಿಸಿದರು. 

ಸ್ಥಳೀಯ ಜೆಸಿ ಶಾಲೆಯು ಆಂಗ್ಲ ಮಾಧ್ಯಮ ಶಾಲೆಯ ಬೇಸಿಗೆ ಶಿಬಿರದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಮೂರ್ತಿ ಮತ್ತು ಭಗವದ್ಗೀತೆಯನ್ನು ಪೂಜಿಸಿ ಕಾರ್ಯಕ್ರಮ ನೆರವೇರಿಸಲಾಯಿತು 

ನಮ್ಮ ಶಾಲೆ ಆಂಗ್ಲ ಮಾಧ್ಯಮ ಶಾಲೆಯಾದರೂ ಸಹ ನಮ್ಮ ಭಾರತೀಯ ಆಚರಣೆಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಜಾಗೃತಗೊಳಿಸಲಾಗುತ್ತಿದೆ ಆ ನಿಟ್ಟಿನಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಗಿಂತ ಮೊದಲು ಶ್ರೀ ಸತ್ಯನಾರಾಯಣ ಪೂಜೆಯನ್ನು ಎಸೆಸೆಲ್ಸಿ ಮಕ್ಕಳಿಂದಲೇ ಮಾಡಿಸಿದ್ದು ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ ಅಮೋಘ ಫಲಿತಾಂಶವನ್ನು ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ ಇದೇ ರೀತಿ ವರ್ಷಪೂರ್ವ ಜನಾವು ನಮ್ಮ ಸನಾತನ ಸಂಸ್ಕಾರವನ್ನು ಸಾರುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇಂದು ಶಿಕ್ಷಕಿಯರಾದ  ತೃಪ್ತಿ ಕುಳ್ಳೊಳ್ಳಿ ಮತ್ತು ಶಬಾನಾ ಮುಂಡಗನೂರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಶ್ರೇಷ್ಠ ಕಾರ್ಯಕ್ರಮ ಮಾಡಿದ್ದಾರೆ ಎಂದು ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಶ್ಲಾಘಿಸಿದರು. 

ವಿದ್ಯಾರ್ಥಿಗಳಾದ ಸಾಯಿಸಂಕಲ್ಪ  ಪರದೇಶಿ, ದಿಯಾ ಪಟೇಲ, ಸಾನಿಕಾ ಮುಂಡಗನೂರ, ಸಮನ್ವಿತಾ ಮುಗೆನ್ನವರ, ಸನ್ನಿಧಿ ನಾಗರಾಳ, ಆದ್ಯಾ ಕಂದಗಲ್ಲ, ನವಮಿ ಚಟ್ಟಿ, ಪೂಜಾ ಹಾದರಗಿ, ಪಲ್ಲವಿ ಜಮಖಂಡಿ, ರೇವಂತ ನಕಾತಿ, ಭೂಮಿಕಾ ಹಳಂಗಳಿ ವೇಷ ತೊಟ್ಟು ಪ್ರತಿಭೆ ಮೆರೆದರು.ಶಿಕ್ಷಕರಾದ ತೃಪ್ತಿ ಕುಳ್ಳೊಳ್ಳಿ, ಶಬಾನಾ ಮುಂಡಗನೂರ, ಸೌರಭ ಮಹಾಜನ್ ಇದ್ದರು.