ಶ್ರೀ ಚನ್ನವೃಷಭೇಂದ್ರ ಲೀಲಾಮಠ ಮಹಾದ್ವಾರ ನಿರ್ಮಾಣಕ್ಕೆ ಶ್ರೀಗಳಿಂದ ಭೂಮಿ ಪೂಜೆ

Dr. Sivananda Bharathi performs Bhoomi Puja for the construction of Sri Channavrishabhendra Leelamat

ಹಾರೂಗೇರಿ 06: ನಿಸ್ವಾರ್ಥ, ನಿಷ್ಕಲ್ಮಶ ಭಕ್ತಿಯಲ್ಲಿ ದೇವರ ಕೃಪಾಶೀರ್ವಾದವಿರುತ್ತದೆ. ಮನುಷ್ಯ ದಾನ, ಧರ್ಮ, ಪರೋಪಕಾರ ಮಾರ್ಗದಲ್ಲಿ ನಡೆದರೆ ಭಗವಂತ ಸಕಲವನ್ನು ದಯಪಾಲಿಸುತ್ತಾನೆ ಎಂದು ಇಂಚಲ-ಹಾರೂಗೇರಿ ಮಠಗಳ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಪಶ್ಚಿಮ ಭಾಗದಲ್ಲಿ ಸುಮಾರು 25 ಲಕ್ಷರೂಗಳ ವೆಚ್ಚದ ಶ್ರೀಮಠದ ಸಕಲ ಸದ್ಭಕ್ತರ ಧನಸಹಾಯದಿಂದ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.  

ಮನುಷ್ಯ ಜನ್ಮ ಸಾರ್ಥಕವಾಗಲು ದಾನ, ಧರ್ಮ ಕಾರ್ಯಗಳನ್ನು ಮಾಡಬೇಕು. ಮಹಾತ್ಮರ ದರ್ಶನಾಶೀರ್ವಾದದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತರಂಗದೊಳಗಿನ ಆತ್ಮ ಶುದ್ಧಿಯಾಗಿ, ಮನಸ್ಸು ಸದ್ಗುಣಗಳಿಂದ ಕೂಡಿರುತ್ತದೆ . ನಿಷ್ಕಾಮ ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಲಭಿಸುತ್ತದೆ. ಪರಮ ಪವಿತ್ರವಾದ ಸುಖವನ್ನು ಪಡೆಯಲು ಸದಾ ಶಿವಧ್ಯಾನದಲ್ಲಿರಬೇಕೆಂದು ಇಂಚಲ ಶ್ರೀಗಳು ಹೇಳಿದರು. 

ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಮಾತನಾಡಿ ಶ್ರೀ ಶಿವಾನಂದ ಭಾರತಿ ಅಪ್ಪಂಗಳವರು ಶ್ರೀ ಚನ್ನವೃಷಭೇಂದ್ರರ ಪ್ರತಿರೂಪ. ಈ ಮಣ್ಣಿನಲ್ಲಿ ದಿವ್ಯವಾದ ಶಕ್ತಿ ಅಡಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀಮಠಕ್ಕಿದೆ. ಭಕ್ತರೇ ಶ್ರೀಮಠದ ಆಸ್ತಿ. ಭಕ್ತರು ನೀಡಿದ ದೇಣಿಗೆಯಿಂದ ಶ್ರೀಮಠದ ಪೂರ್ವ ಭಾಗಕ್ಕೆ ಮಹಾದ್ವಾರ ನಿರ್ಮಾಣಗೊಂಡಿದೆ. ಈಗ ಭಕ್ತರು ನೀಡಿದ ದೇಣಿಗೆಯಿಂದ ಶ್ರೀಮಠದ ಪಶ್ಚಿಮ ದಿಕ್ಕಿಗೆ ಮಹಾದ್ವಾರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. 

ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ನೇಮಿನಾಥ ಕೊತ್ತಲಗಿ, ಲಾಲಸಾಬ ಜಮಾದಾರ, ಜ್ಯೋತೆಪ್ಪ ಉಮರಾಣಿ, ಅಮರ ಬಂತಿ, ಚನ್ನಬಸು ಗಾಳಿ, ಭುಜಪ್ಪ ಸದಲಗಿ, ರಾಜು ಕರ್ಣವಾಡಿ, ತಮ್ಮಣ್ಣಿ ಕುರಿ, ವಸಂತ ಲಾಳಿ, ಭಗವಂತ ಸೂರಣ್ಣವರ, ರಾಘವೇಂದ್ರ ದೇಶಪಾಂಡೆ, ನರಸಪ್ಪ ದಟವಾಡ, ಗೋಪಾಲ ಧರ್ಮಟ್ಟಿ, ವಿಜಯ ಬಂತಿ, ಸುಭಾಸ ಸಂಗನಗೌಡರ, ಜಿನ್ನಪ್ಪ ಸುಬ್ಬಣ್ಣವರ, ಮಾರುತಿ ಹಾಡಕಾರ, ಶಶಿಧರ ಶಿಂಗೆ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.