ಕವಿ ಸಾಮಗೆ ಭಾಸೃಕಸಾ ಬಳಗದಿಂದ ಸನ್ಮಾನ
ಲೋಕದರ್ಶನ ವರದಿ
ಹಾವೇರಿ06: ನಗರದ ಹುಕ್ಕೇರಿಮಠದ ಸಭಾಂಗಣದಲ್ಲಿ ಇತ್ತೀಚೆಗೆ ಹಾವೇರಿ ಜಿಲ್ಲಾ ಘಟಕದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದಿಂದ ಘಟಕದ ವಾಷರ್ಿಕೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ಬಳಗ ನಡೆದು ಬಂದ ಹಾದಿಯನ್ನು ಒಳಗೊಂಡ ವಾಷರ್ಿಕ ವರದಿಯನ್ನು ಮತ್ತು ವಿವೇಕಾನಂದ ಕಾವ್ಯಸಿರಿ ಸಂಪಾದಿಸಿದ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವದಾಖಲೆ ಪುರಸ್ಕೃತ ಬರಹಗಾರ ಸೋಮನಕಟ್ಟಿಯ ವೀರನಗೌಡ ಪಾಟೀಲ (ಸಾಮ) ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇವರು ಕನ್ನಡದಲ್ಲಿ 'ಹ' ಕಾಗುಣಿತಾಕ್ಷರಗಳಿಂದಲೇ ಪ್ರತಿಯೊಂದು ಶಬ್ದವೂ ಪ್ರಾರಂಭವಾಗುವಂತೆ ರಚಿಸಿದ 300(ಪ್ರಸ್ತುತ 500) ಪುಟಗಳ ವಿಶೇಷ ಕಾದಂಬರಿ ವಿಶ್ವದಾಖಲೆ ಸೇರಿದಂತೆ ಒಟ್ಟು ನಾಲ್ಕು ದಾಖಲೆ ಪ್ರಶಸ್ತಿ ಪಡೆದಿರುವುದು ವಿಶೇಷವಾಗಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಭಾಸೃಕಸಾ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ, ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷ ವೆಂಕಟೇಶ ಈಡಿಗೇರ, ಖ್ಯಾತ ಸಂಘಟಕ ಪ್ರಭಾಕರ ಶಿಗ್ಲಿ, ಸಾಹಿತಿಗಳಾದ ಭಾಗ್ಯ.ಎಂ.ಕೆ, ಶಕುಂತಲಾ ದಾಳೇರ,ದಾವಲ ಮಲೀಕ ಇಂಗಳಗಿ, ರಾಹೀಲ್ ರಾಜಾಭಕ್ಷು.ಸಿ.ಎಂ, ಸಿ.ಜಿ.ಮಲ್ಲೂರ ಹಾಗೂ ಪೀರಸಾಬ್ ನದಾಫ್ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 