ಸಡಗರದ ಬಗರನಾಳದ ಭಕ್ತಿಭಾವದಿಂದ ರಾಮಲಿಂಗೇಶ್ವರ ರಥೋತ್ಸವ

ಸಡಗರದ ಬಗರನಾಳದ ಭಕ್ತಿಭಾವದಿಂದ ರಾಮಲಿಂಗೇಶ್ವರ ರಥೋತ್ಸವ The Ramalingeshwara Chariot Festival, celebrated with deep, jubilant devotion

ಲೋಕದರ್ಶನ ವರದಿ 

ಗೋಕಾಕ 08 : ತಾಲೂಕಿನ ಬಗರನಾಳ ಗ್ರಾಮದ ಆರಾಧ್ಯ ದೈವ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ರಥೋತ್ಸವವು ಸೋಮವಾರದಂದು ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿತು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾ  ಮಂಗಳಾರತಿ ನೆರವೇರಿದವು. ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ಜಗದೀಶ್ ದೊಡಮನಿ ಕುಟುಂಬದವರು ಸುಮಾರು 325 ಮುತ್ತೈದೆಯರಿಗೆ ಉಡಿ ತುಂಬುವ ಸಾಮಗ್ರಿಗಳನ್ನ ನೀಡಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.  ಅ

ಲಂಕರಿಸಿದ ರಥದಲ್ಲಿ   ರಾಮಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಂದಿಕೋಲಿನೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ನೂರಾರು ಭಕ್ತರುಭಕ್ತಿಭಾವದಿಂದ ರಥವನ್ನು ಎಳೆದರು. ರಥೋತ್ಸವವು ಗ್ರಾಮದ ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಸಾಮಾಜಿಕ ಏಕತೆಯ ಪ್ರತೀಕವಾಗಿ ಗಮನ ಸೆಳೆಯಿತು. ದೇವಸ್ಥಾನ ಆಡಳಿತ ಮಂಡಳಿ, ಜಾತ್ರಾ ಸಮಿತಿ, ಸ್ವಯಂಸೇವಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಸಂಚಾಲಕ ಶಿಕ್ಷಕ ಪ್ರಕಾಶ ಕುರಬೇಟ ನಿರೂಪಿಸಿದರು.