ಮಠ, ಮಂದಿರಗಳು ಭಾರತ ದೇಶದ ಭವ್ಯ ಪರಂಪರೆಯ ಪ್ರತೀಕವಾಗಿವೆ : ಪ್ರಣಯ ಪಾಟೀಲ
Temples and monasteries are symbols of India's great heritage: Pranaya Patil
ಮಠ, ಮಂದಿರಗಳು ಭಾರತ ದೇಶದ ಭವ್ಯ ಪರಂಪರೆಯ ಪ್ರತೀಕವಾಗಿವೆ : ಪ್ರಣಯ ಪಾಟೀಲ
ರಾಯಬಾಗ 30: ದೇಶದ ಜನರನ್ನು ಒಂದೆಡೆ ಸೇರಿಸುವ ಮಠ, ಮಂದಿರಗಳು ಭಾರತ ದೇಶದ ಭವ್ಯ ಪರಂಪರೆಯ ಪ್ರತೀಕವಾಗಿವೆ ಎಂದು ಜಿ.ಪಂ.ಮಾಜಿ ಸದಸ್ಯ, ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಹೇಳಿದರು.
ಬುಧವಾರ ರಾಯಬಾಗ ರೈಲ್ವೆ ಸ್ಟೇಷನದ (ಖೈರವಾಡಿ) ಲಕ್ಷ್ಮೀದೇವಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಶ್ರದ್ಧಾಭಕ್ತಿಗಳಿಂದ ಮನುಷ್ಯನು ಶಾಂತಿ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ಹಬ್ಬಗಳಲ್ಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಜಾತಿ, ಮತ, ಪಂಥಗಳ ತಾರತಮ್ಯಗಳಿಲ್ಲದೇ ಎಲ್ಲ ಜನರು ಒಟ್ಟಾಗಿ ಪಾಲ್ಗೊಂಡು ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ ಎಂದರು. ದೇವಸ್ಥಾನ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮರೆಪ್ಪ ದಿಪಾಳೆ, ರಾಯಪ್ಪ ಗೊಂಡೆ, ಗುಣಪಾಲ ಬಡೋರೆ, ಸಂಜು ಬಾವಚೆ, ರಮೇಶ ಕುಂಬಾರ, ಅಣ್ಣಪ್ಪ ಹೊಸಕೋಟೆ, ಸಂತೋಷ ತೇರದಾಳೆ, ತಾನಾಜಿ ದಿಪಾಳೆ, ಮಹಾವೀರ ಶೆಟ್ಟಿ, ಸಂತೋಷ ಶೆಟ್ಟಿ, ಬೀರ್ಪ ಗೊಂಡೆ, ಹಾಲಪ್ಪ ಅಳಗವಾಡಿ, ಕುಮಾರ ಹೊಸಕೋಟೆ, ಬೀರಾ ಗೆನಾನಿ, ಅಣ್ಣಪ್ಪ ಮುಧೋಳೆ, ಕಲ್ಲಪ್ಪ ನಾಗರಾಳೆ ಹಾಗೂ ನೂರಾರು ಭಕ್ತರು ಇದ್ದರು.
ಫೋಟೊ ಶೀರ್ಷಿಕೆ: ರಾಯಬಾಗ: ರೈಲ್ವೆ ಸ್ಟೇಷನದ (ಖೈರವಾಡಿ) ಲಕ್ಷ್ಮೀದೇವಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಉದ್ಘಾಟಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 