ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ: ತಪ್ಪಿತಸ್ಥರ ವಿರುದ್ಧಕ್ರಮಕ್ಕೆ ರೈತ ಸಂಘದ ಒತ್ತಾಯ
Selling fertilizer at high prices: Farmers' association demands action against those responsible
ಲಕ್ಷ್ಮೇಶ್ವರ 03: ಇಡೀ ನಾಡಿಗೆ ಅನ್ನ ನೀಡುವ ಅನ್ನದಾತರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ವ್ಯವಸಾಯ ಬಿಟ್ಟರೆ ಇವರಿಗೆ ಬೇರೆ ಉದ್ಯೋಗವೇ ಗೊತ್ತಿರುವುದಿಲ್ಲ ಸಾಲ ಸೋಲು ಮಾಡಿ ಆದರೂ ವ್ಯವಸಾಯವನ್ನು ಮಾಡುತ್ತಾರೆ ಸರಕಾರ ಮಾತ್ರ ರೈತರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಇದರಿಂದ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸುವುದ ಮಾತ್ರ ತಪ್ಪುತಿಲ್ಲ. ತಾಲೂಕಿನಲ್ಲಿ ಮುಂಗಾರು ಬಿತ್ತನೆಯ ಈ ಸಮಯದಲ್ಲಿ ರೈತರ ಬಿತ್ತನೆ ಚಟುವಟಿಕೆ ಕಾರ್ಯ ಚುಲುಕುಗೊಂಡಿದ್ದು ರೈತರಿಗೆ ರಸಗೊಬ್ಬರ ಬೀಜದ ಅವಶ್ಯಕತೆ ಇದ್ದೇ ಇರುತ್ತದೆ ಇದನ್ನೇ ಕೆಲವು ವ್ಯಾಪಾರಸ್ಥರು ಸದುಪಯೋಗ ಪಡಿಸಿಕೊಂಡು ಗದಗ ಲಕ್ಷ್ಮೇಶ್ವರ ಭಾಗದಲ್ಲಿ ರಸಗೊಬ್ಬರ ಮೇಲಿನ ಎಂಆರಿ್ಪ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ.
ರಸಗೊಬ್ಬರ ಜೊತೆಗೆ ಲಿಂಕ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಗೊಬ್ಬರ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ ಇದರಿಂದ ರೈತರು ಸಾಕಷ್ಟು ತೊಂದರೆ ಮತ್ತು ಹೆಚ್ಚಿನ ಬೆಲೆಗೆ ಗೊಬ್ಬರ ಖರೀದಿಸುವಂಥಾಗಿದ್ದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಗೊಬ್ಬರದ ಅಂಗಡಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಹೋರಾಟಗಾರ ಬಿಜೆಪಿ ಹಿರಿಯ ಮುಖಂಡರಾದ ಸೋಮಣ್ಣ ಡಾಣಗಲ್,ಶಿಗ್ಲಿ ಗ್ರಾಮದ ಹಿರಿಯ ರೈತ ಮುಖಂಡರಾದ ಎಚ್ ಎಫ್ ತಳವಾರ, ಗುರುನಾಥಗೌಡ್ರು ಕೊಕ್ಕರಗುಂದಿ, ನೀಲಪ್ಪ ಹತ್ತಿಕಾಳ,ಪುಟ್ಟಪ್ಪ ಬದಿ, ಪ್ರಕಾಶ್ ಹುನುಗುಂದ ವಿಠಲಸಾ ಬದಿ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 