ಸರ್ವಜ್ಞ ವಿದ್ಯಾಪೀಠ: ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮ
Sarvajna Vidyapeeth: Anemia prevention program
ತಾಳಿಕೋಟಿ :ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಅನೀಮಿಯಾ ಮುಕ್ತ ಭಾರತ ನಿಮಿತ್ಯವಾಗಿ ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸರ್ವಮಂಗಲ ಫ್ಯಾಮಿಲಿ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಪ್ರಯೋಜಕರು ರಕ್ತಹೀನತೆ ರಕ್ತದಲ್ಲಿನ ಹಿಮೋಗ್ಲೋಬಿನ್ ಸಾಮಾನ್ಯಗಿಂತ ಕಡಿಮೆ ಇರುವುದು. ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಯಿತು. ಮತ್ತು ರಕ್ತ ಹೀನತೆಯನ್ನು ನಾವು ಹೇಗೆ ತಡೆಗಟ್ಟುವುದು ಕಬ್ಬಿಣ ಅಂಶದ ಆಹಾರವನ್ನು ಸೇವಿಸುವ ಆರೋಗ್ಯ ವಾರಿ ಕುರಿತು ಕಬ್ಬಿಣದ ಪೂರಕ ಸೇವನೆ ಮಾಡುವಾಗ ಗಮನಿಸಬೇಕಾದ ಅಂಶಗಳ ಕುರಿತು ರಕ್ತ ಹೀನತೆ ಇದೆ ಎಂದು ಹೇಗೆ ತಿಳಿಯುವುದು ಹಿಮೋಗ್ಲೋಬಿನ್ ಮಟ್ಟವನ್ನು ತಿಳಿಯುವುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕ ಶಾಂತಗೌಡ ಬಿರಾದಾರ, ರವಿಕುಮಾರ ಮಲಾಬಾದಿ, ಕಾರ್ಯಕ್ರಮದ ಸಂಯೋಜಕರಾದ ಶಾಂತಾಬೆಲಾಳ, ಸಿಬ್ಬಂದಿ ವರ್ಗದವರಾದ ಸೋಮು ಸಜ್ಜನ್, ಧನಪಾಲ, ಶಕುಂತಲಾ ಮಠ ಕುಸುಮಾ ಮಠ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 