ತಾಹಿರ ಆಲಿ ಸುಪುತ್ರಿಯ ಮದುವೆಗೆ ನಿವೃತ್ತಿ ಶಿಕ್ಷಕ ಸಾದತ್‌ಉಲ್ಲಾ ಗೆ ಆಮಂತ್ರಣ
Retired teacher Saadatullah invited to Tahir Ali's daughter's wedding
ತಾಹಿರ ಆಲಿ ಸುಪುತ್ರಿಯ ಮದುವೆಗೆ ನಿವೃತ್ತಿ ಶಿಕ್ಷಕ ಸಾದತ್‌ಉಲ್ಲಾ ಗೆ ಆಮಂತ್ರಣ
ಕೊಪ್ಪಳ 31: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಮುಖಂಡ ಉದ್ಯಮಿ ಹಾಲಿ ವಸತಿ ಮೈಸೂರಿನ ತಾಹಿರ್ ಅಲಿ ಯವರ ಸುಪುತ್ರಿ ಡಾ, ಸಭಾ ತಝಮೀನ್ ರವರ ಮದುವೆ(ನಿಖಾ) ಹಾಲಿ ವಸತಿ ಬೆಂಗಳೂರಿನ ಡಾ, ಶೇಕ್ ಮುನಾಫ್ ರೊಂದಿಗೆ ನಿಶ್ಚಯಗೊಂಡಿದ್ದು ಕಾರ್ಯಕ್ರಮ ಜೂನ್ 12 ರ ಗುರುವಾರ ದಂದು ಮೈಸೂರಿನಲ್ಲಿ ಜರುಗಲಿದ್ದು ಸದರಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿಜ್ಞಾನ ವಿಭಾಗದ ನಿವೃತ್ತಿ ಶಿಕ್ಷಕ ಸೈಯದ್ ಸಾದತ್ ಉಲ್ಲಾ ಅವರ ನಿವಾಸ ಚಿತ್ರದುರ್ಗಕ್ಕೆ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ಸಲ್ಲಿಸಿ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ಸ್ಪಂದಿಸಿದ ಅವರು ಮದುವೆ ಕಾರ್ಯಕ್ರಮ ದಲ್ಲಿ ಭಾಗಿಯಾಗುವುದಾಗಿ ಅಧಿಕೃತ ಭರವಸೆ ನೀಡಿದ್ದಾರೆ ಎಂದು ವಿವರಿಸಿದ ಅವರು ಚಿತ್ರದುರ್ಗದ ಹಿರಿಯ ನಿವಾಸಿ ವಿಜ್ಞಾನ ವಿಭಾಗದ ನಿವೃತ್ತಿ ಶಿಕ್ಷಕ ಸೈಯದ್ ಸಾದತ್ ಉಲ್ಲಾ ಅವರು 1980-81ರಲ್ಲಿ ಕೊಪ್ಪಳದ ಸರ್ಕಾರಿ ಪ್ರೌಢ ಉರ್ದು ಶಾಲೆ ಯಲ್ಲಿ ವಿಜ್ಞಾನ ಶಿಕ್ಷಕರಾಗಿ ನಮಗೆ ವಿದ್ಯಾಭ್ಯಾಸ ಮಾಡಿದ ನಮ್ಮ ನೆಚ್ಚಿನ ಗುರುಗಳಾಗಿದ್ದು ಅವರನ್ನು ಖುದ್ದು ಭೇಟಿಯಾಗಿ ನನ್ನ ಮಗಳ ಮದುವೆಗೆ ಆಗಮಿಸುವಂತೆ ಕೋರಲಾಗಿದೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಭಾಗಿಯಾಗುವ ಭರವಸೆ ವ್ಯಕ್ತವಾಗಿದೆ ಎಂದು ತಾಹಿರಅಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಇಮ್ರಾನ್ ಅಹಮದ್ ಜಾಗೀರ್ದಾರ್ , ಅಮೇರಿಕಾದಲ್ಲಿ ಇಂಜಿನಿಯರಿಂಗ್ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಷದ್ ಅಲಿ ಕೊಪ್ಪಳ ಜಿಲ್ಲೆಯ ಪತ್ರಕರ್ತ ಅಶ್ಫಾಕ್ ಅಹಮದ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. ಇದೆ ವೇಳೆ ಗುರುಗಳು ತಮ್ಮ ನಿವಾಸಕ್ಕೆ ಭೇಟಿ ನೀಡಿದ ಈ ಶುಭ ಸಂದರ್ಭದಲ್ಲಿ ತಾಹಿರ್ ಅಲಿಯವರಿಗೆ ಸನ್ಮಾನಿಸಿ ಶುಭ ಕೋರಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 