ಕೆಎಸ್‌ಆರ್‌ಪಿ ಪೇದೆಗೆ ಕೊರೊನಾ: ಹಲವೆಡೆ ಕರ್ತವ್ಯ ನಿರ್ವಹಿಸಿದ್ದರಿಂದ ಹೆಚ್ಚದ ಆತಂಕ
ಬೆಂಗಳೂರು, ಮೇ 26,ಎರಡು ದಿನಗಳ ಹಿಂದೆ ಬೆಳಕಿಗೆ ಬಂದ ಕೊರೊನಾ ಸೋಂಕಿತಹಾಸನ ಕೆಎಸ್‌ಆರ್‌ಪಿ ಪೇದೆ (ರೋಗಿ ಸಂಖ್ಯೆ 1993)ಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ, ಹಾಸನ, ಬೆಂಗಳೂರು ಗ್ರಾಮಾಂತರ, ಅತ್ತಿಬೆಲೆ, ರಾಮನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೇ 17 ರಿಂದ ಮೇ 19ರವರೆಗೆ ವಿವಿಧ ಕಡೆ ಕರ್ತವ್ಯ ನಿರ್ವಹಿಸಿದ್ದ ಪೇದೆಯು ನೂರಕ್ಕೂ ಅಧಿಕ ಜನರ ಜೊತೆ ಸಂಪರ್ಕ ಹೊಂದಿದ್ದು ಅವರೆಲ್ಲರಿಗೂ ಆತಂಕ ಎದುರಾಗಿದೆ.ಕಳೆದ ಮೇ 7 ರಂದು ಹಾಸನದಿಂದ 20 ಸಹೋದ್ಯೋಗಿಗಳ ಜೊತೆ ಬೆಂಗಳೂರಿಗೆ ಬಂದಿದ್ದ ಪೇದೆಯನ್ನು ಮಾದನಾಯಕನಹಳ್ಳಿ ಬಳಿ ಬಿಹಾರಿ ಕಾರ್ಮಿಕರ ಬಂದೋಬಸ್ತ್ ಮಾಡಲು ನಿಯೋಜಿಸಲಾಗಿತ್ತು.ಅಂಚೆಪಾಳ್ಯದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಹೋದ್ಯೋಗಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ ಜೊತೆ ವಾಸ್ತವ್ಯ ಮಾಡಿದ್ದರು.
ಮೇ 8-9 ರಂದು ಮಾದನಾಯಕನಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಮೇ 10ರಿಂದ 14ರವರೆಗೆ ಅತ್ತಿಬೆಲೆ ಚೆಕ್‍ಪೋಸ್ಟ್ ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.ಮೇ 14ರವರೆಗೂ ಅತ್ತಿಬೆಲೆ ಸಮೀಪದ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ಇವರು ಮೇ 14ರ ಮಧ್ಯಾಹ್ನ ಬಿಡದಿಯಲ್ಲಿ ಮುತ್ತಪ್ಪ ರೈ ಶವಯಾತ್ರೆಯ ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.ಅಂದು ರಾತ್ರಿ ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದರು. ಮೇ 15ರಿಂದ 17ರವರೆಗೆ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ, ಮೇ 17ರ ಸಂಜೆ ಹಾಸನಕ್ಕೆ ಮರಳಿದ್ದಾರೆ. ಹಾಸನಕ್ಕೆ ಬಂದ ಬಳಿಕ ಆಟೋದಲ್ಲಿ ಎನ್ ಆರ್ ವೃತ್ತಕ್ಕೆ ಪ್ರಯಾಣಿಸಿ ಪುಸ್ತಕ ಮಳಿಗೆ, ಬಟ್ಟೆ ಅಂಗಡಿ, ದಿನಸಿ ಅಂಗಡಿಗೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ಮೇ 19 ರಂದು 94 ಸಹೋದ್ಯೋಗಿಗಳ ಜೊತೆ ಪಿ.ಟಿಯಲ್ಲಿ ಭಾಗಿಯಾಗಿದ್ದರು. ಅದೇ ದಿನ ರಾತ್ರಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪಡೆದು ಲ್ಯಾಬ್ ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.12 ದಿನದಲ್ಲಿ ಹಲವು ಜನರ ಜೊತೆ ನೇರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಸದ್ಯಕ್ಕೆ ಸಮಾಧಾನ ನೀಡುವ ಸಂಗತಿಯಾಗಿದೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 