24 ರಿಂದ ಇಂಡಿ ಹುಸೇನ್ ಬಾಷಾ ದರ್ಗಾ ಜಾತ್ರೆ

24 ರಿಂದ ಇಂಡಿ ಹುಸೇನ್ ಬಾಷಾ ದರ್ಗಾ ಜಾತ್ರೆ Indi Hussain Basha Dargah Fair from 24th

ಲೋಕದರ್ಶನ ವರದಿ  

ಇಂಡಿ 19 : ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸಂಕೇತಿಕ ದೇವರಾದ ನಗರದ ಪ್ರಸಿದ್ಧ ಹುಸೇನ್ ಭಾಷಾ ದರ್ಗಾ ಜಾತ್ರೆಯು ಇದೆ ದಿನಾಂಕ 24-06-2026 ರಿಂದ 25-06-2026 ರವರಿಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ. 24-06-2026 ಬುಧವಾರದಂದು ಆಟವಿ ಖತಾಲ್ ಇರುತ್ತದೆ 25-06-2026 ಗುರುವಾರ ದಂದು ನಸುಕಿನ ಜಾವ 4-00 ಗಂಟೆಗೆ ದರ್ಗಾದ ಧರ್ಮದರ್ಶಿಗಳು ಮತ್ತು ಊರಿನ ಗೌಡರಾದ ದಾದಾಗೌಡ ಬಾಬಾಗೌಡ ಪಾಟೀಲ್ ಅವರ ಮನೆತನದವರಿಂದ ದೇವರಿಗೆ ಗಂಧ ಗಲೀಪು ಮತ್ತು ಹೂವುಗಳನ್ನು ಅರ​‍್ಿಸಿ ದೇವರುಗಳನ್ನು ಎಬ್ಬಿಸುತ್ತಾರೆ. ನಂತರ ದೇವರು ಹಳ್ಳದ ಓಣಿಯಿಂದ ಮಹಾವೀರ ಸರ್ಕಲ್, ಬಜಾರ್ ಓಣಿಯ ಮೂಲಕ ವಾದ್ಯ ವೈಭವದೊಂದಿಗೆ ಮೂಲ ಸ್ಥಾನ ದರ್ಗಾಕ್ಕೆ ಬಂದು ಕೂಡುತ್ತದೆ ಎಂದು ಧರ್ಮದರ್ಶಿ ಮನೆತನದ ಹಿರಿಯರಾದ ಭೀಮನಗೌಡ ಪಾಟೀಲ್ ಹಾಗೂ ಪ್ರಭುಗೌಡ ಪಾಟೀಲ್ ಜಂಟಿಯಾಗಿ ತಿಳಿಸಿದರು...  ಈ ಸಂದರ್ಭದಲ್ಲಿ ಶ್ರೀಶೈಲ್ ಗೌಡ ಪಾಟೀಲ್ ಶರಣಗೌಡ ಪಾಟೀಲ್ ತುಕಾರಾಮ ವಾಲಿಕಾರ್ ಬಾಪುಗೌಡ್ ಪಾಟೀಲ್ ಆದಿಲ್ ಮಕಾಂದಾರ ಹುಮಾಯೂನ್ ಮಕಾಂದಾರ ರಫೀಕ್ ಮಕಾಂದಾರ ಉಪಸ್ಥಿತರಿದ್ದರು.