ಮಾನವ ಸೇವೆ ಸರ್ವಶಕ್ತ ಸೇವೆ: ಹೆಗಡೆ
ಲೋಕದರ್ಶನ ವರದಿ
ಬೆಳಗಾವಿ 11: ಮಾನವ ಕುಲದ ಸೇವೆಯೇ ಸರ್ವಶಕ್ತವಾದ ಸೇವೆಯಾಗಿದೆ. ಮನಕುಲದ ಸೇವೆಯಿಂದ ಜೀವನದಲ್ಲಿ ನೆಮ್ಮದಿ ಕಾಣಬಹುದು.ಸರ್ವರಿಗೂ ಸಮಬಾಳು ಇದ್ದರೆ ಮಾತ್ರ ಮನಕುಲದ ಉನ್ನತಿ ಹೊಂದಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಧರ್ಮಸ್ಥಳದ ಡಿ.ಸುರೇಂದ್ರಕುಮಾರ ಹೆಗ್ಗಡೆ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಬೆಳಗಾವಿಯ ಮಹಾವೀರ ಭವನದಲ್ಲಿ ಸೋಮವಾರ ಸಾಯಂಕಾಲ ಜೈನ ಸಮಾಜದ ವಿವಿಧ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವ ಸೇವೆ ಈಶ ಸೇವೆ ಎಂಬ ವಿಶ್ವಾಸದಿಂದ ಸಾಮಾಜಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದರಿಂದ ಇಂದು ತಮಗೆ ಈ ಪ್ರಶಸ್ತಿ ಲಭಿಸಿದೆ. ನನ್ನ ಸೇವೆಯ ಹಿಂದೆ ನಮ್ಮ ಸಹೋದರ ಡಾ. ವಿರೇಂದ್ರ ಹೆಗ್ಗಡೆ ಅವರ ಪ್ರೇರಣೆಯೇ ಕಾರಣವಾಗಿದೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಬೆಳಗಾವಿಯ ಸಮಸ್ತ ಜೈನ ಸಮಾಜದ ಪರವಾಗಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಪುಷ್ಪದಂತ ದೊಡ್ಡಣ್ಣವರ, ರಾಜೀವ ದೊಡ್ಡಣ್ಣವರ, ರಾಜೇಂದ್ರ ಜೈನ,ಸೆವಂತಿಲಾಲ ಶಹಾ , ಬಾಳಾಸಾಹೇಬ ಪಾಟೀಲ, ಗೋಪಾಲ ಜಿನಗೌಡ ಮೊದಲಾದವರು ಡಿ.ಸುರೇಂದ್ರಕುಮಾರ ಹೆಗ್ಗಡೆ ಅವರನ್ನು ಸನ್ಮಾನಿಸಿದರು. ಅದಲ್ಲದೇ ವಿವಿಧ ಜೈನ ಸಂಘಟನೆಗಳು, ವಿವಿಧ ಮಹಿಳಾ ಮಂಡಳಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಪುಷ್ಪಕ ಹನಮಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ವಿನೋದ ದೊಡ್ಡಣ್ಣವರ ಅವರು ಪರಿಚಯಿಸಿದರು. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 