ರಸ್ತೆ, ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ: ಶಾಸಕ ಐಹೊಳೆ
High priority is being given to road and bridge construction: MLA Aihole
ರಾಯಬಾಗ, 30 : ರೈತರ ಆರ್ಥಿಕ ಸುಧಾರಣೆಗೆ ಸುವ್ಯವಸ್ಥಿತ ರಸ್ತೆಗಳ ಅಗತ್ಯವಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಭಾನುವಾರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಜಿ.ಪಂ.ಇಲಾಖೆಯಿಂದ ಮಂಜೂರಾದ 25 ಲಕ್ಷ ರೂ. ಅನುದಾನದಲ್ಲಿ ಗ್ರಾಮದ ಹನುಮಾನ ಮಂದಿರದಿಂದ ರೈಲ್ವೆ ಓವರ್ ಬ್ರಿಡ್ಜ್ ವರಗೆ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ರಾಯಬಾಗ ಗ್ರಾಮೀಣ ಭಾಗದ ಆನೇಬಾಯಿಕೊಡಿಯಲ್ಲಿ ಕುಡಚಿ ಜೆ.ಎಲ್.ಬಿ.ಸಿ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ.ಅನುದಾನದಲ್ಲಿ ರಾಯಬಾಗ ಹಂಚು ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಸಲು ಗುಣಮಟ್ಟದ ರಸ್ತೆಗಳ ಅಗತ್ಯವಿದೆ ಎಂದರು.
ಜಿ.ಪಂ.ಇಲಾಖೆ ಎಇ ಎಸ್.ಎಸ್.ಹೊಸಮನಿ, ಜೆ.ಎಲ್.ಬಿ.ಸಿ ಎಇಇ ಮಹ್ಮದ ಮುಸ್ತಾಫ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೇಮಲಾಪೂರೆ, ಅಪ್ಪಾಸಾಹೇಬ ಕೆಂಗನ್ನವರ, ಸತ್ಯಪ್ಪ ದಾವಣೆ, ಮಜ್ಜಿದ ಡಾಂಗೆ, ಗೋಪಾಲ ಕೊಚೆರಿ, ಅಸ್ಲಂ ಡಾಂಗೆ, ಅಣ್ಣಾಸಾಹೇಬ ಮಗದುಮ್ಮ, ಭೀಮು ಮುಧೊಳೆ, ರಾಜು ಚೌಗಲಾ, ಬಸು ಮಗದುಮ್ಮ, ರಾಜು ಐಹೊಳೆ,ಶಾಹುರ ಡಾಂಗೆ, ಸಲೀಂ ಡಾಂಗೆ, ದಾವುದ ಡಾಂಗೆ, ಅಯುಬ ಡಾಂಗೆ, ರಂಜಾನ ಮಕಾನದಾರ, ಅಬು ಡಾಂಗೆ ಸೇರಿ ಅನೇಕರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 