ಸರ್ವೆ ಕಚೇರಿಗೆ ಭೂ ದಾಖಲೆ ಉಪನಿರ್ದೇಶಕರ ಭೇಟಿ

ಸರ್ವೆ ಕಚೇರಿಗೆ ಭೂ ದಾಖಲೆ ಉಪನಿರ್ದೇಶಕರ ಭೇಟಿ  Deputy Director of Land Records visits Survey Office


ಇಂಡಿ 19: ತಹಶೀಲ್ದಾರ್ ಕಚೇರಿಯ ಸರ್ವೆ ಕಚೇರಿಯಲ್ಲಿ ಸರ್ಕಾರಿ ಕಡತಗಳು ಹಾಗೂ ಪ್ರಮುಖ ದಾಖಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು ‘ಲೋಕದರ್ಶನ’ದಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ವಿಜಯಪುರ ಭೂ ದಾಖಲೆಗಳ ಉಪನಿರ್ದೇಶಕ ರವಿಕುಮಾರ್ ಸಾಗರ ಅವರು ಕಚೇರಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಅಭಿಲೇಖಾಲಯಕ್ಕೆ ಭೇಟಿ ನೀಡಿ ದಾಖಲೆಗಳ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಬಳಿಕ ನಗರಮಾಪನ ಕಚೇರಿಗೂ ಭೇಟಿ ನೀಡಿ ಪರೀಶೀಲನೆ ನಡೆಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್ ಸಾಗರ, ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಮಾಹಿತಿ ಆಧರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.