ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
Demand to complete Rabakavi-Mahishwadagi bridge work
ರಬಕವಿ-ಬನಹಟ್ಟಿ 10: ಡಿಸೆಂಬರ್ ತಿಂಗಳಲ್ಲಿ ಐದು ದಿನಗಳ ಕಾಲ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದ ವೇದಿಕೆಗೆ ಬಂದು ಮೂರು ದಿನಗಳಲ್ಲಿ ಕಾಮಗಾರಿ ನಡೆಸಿ ಪೂರ್ಣಗೊಳಿಸುವ ಭರವಸೆ ನೀಡಿ ತಂಪು ಪಾನೀಯ ಕುಡಿಸಿ ನಿರಶನಕ್ಕೆ ತೆರೆ ಎಳೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಂಗಳುಗಳು ಗತಿಸಿದರು ಇದೂವರೆಗೆ ಕಾಮಗಾರಿಗೆ ಚಾಲನೆ ನೀಡಿಲ್ಲ.
ಸದ್ಯ ಹಿಪ್ಪರಗಿ ಜಲಾಶಯದ 22ನೇ ಗೇಟ್ ಕಿತ್ತು ನದಿಪಾತ್ರ ಸಂಪೂರ್ಣ ಖಾಲಿಯಾಗಿ ಮೂಲ ಪಿಲ್ಲರ್‌ಗಳು ಕಣ್ಣಿಗೆ ರಾಚುತ್ತಿವೆ. ಕಾಮಗಾರಿ ನಡೆಸಲು ನದಿಯಲ್ಲಿನ ನೀರು ಖಾಲಿಯಾಗದ್ದನ್ನು ಕಾರಣ ನೀಡುತ್ತಿದ್ದ ಗುತ್ತಿಗೆದಾರ ಹಾಗೂ ಇಲಾಖೆ ಅಭಿಯಂತರರು ಇದೀಗ ನದಿಪಾತ್ರದ ಮೂಲ ಪಿಲ್ಲರ್‌ಗಳು ತೆರವಾಗಿರುವ ಸಮಯ ಬಳಸಿಕೊಂಡು ತಕ್ಷಣ ಕಾಮಗಾರಿ ನಡೆಸಿ ನದಿಯಲ್ಲಿನ ಪಿಲ್ಲರ್‌ಗಳನ್ನು ಅಳವಡಿಸಿ ಪೂರ್ಣಗೊಳಿಸಲು ಅವಕಾಶವಿದ್ದು, ತಕ್ಷಣ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸಬೇಕೆಂದು ಪ್ರಸನ್ನ ಹಜಾರೆ, ಸಂಜಯ ತೇಲಿ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ದಲಾಲ, ಬಸವರಾಜ ಗುಡೋಡಗಿ, ಯುನೂಸ್ ಚೌಗಲಾ ಮೊದಲಾದವರು ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 