ಅಡುಗೆ ಅನಿಲ ಸ್ಫೋಟ: ಗೃಹಪಯೋಗಿ ವಸ್ತುಗಳು ಹಾನಿ
Cooking gas explosion: Household appliances damaged
ರಾಯಬಾಗ, 22 : ತಾಲೂಕಿನ ಭೆಂಡವಾಡ ಗ್ರಾಮದ ತೋಟದ ಮನೆಯಲ್ಲಿರುವ ರೂಪಾ ನಿರಂಜನ ಘಂಟಿ ಅವರ ಶೆಡ್ಡಿನ ಮನೆಯಲ್ಲಿ ಗುರುವಾರ ಮಧ್ಯರಾತ್ರಿ (ನಸುಕಿನ ಜಾವ) ಅಡುಗೆ ಅನಿಲ ಸ್ಫೋಟಗೊಂಡು ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಮತ್ತು ಕಾಗದಪತ್ರಗಳು ಸುಟ್ಟು ಕರಕಲವಾಗಿವೆ. ಸ್ಫೋಟದಿಂದ ಯಾವದೇ ಜೀವ ಹಾನಿಯಾಗಿರುವುದಿಲ್ಲ.
ಗುರುವಾರ ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿ ಮನೆಯಲ್ಲ ವ್ಯಾಪಿಸಿ ಅಲ್ಲಿಯೇ ಸಮೀಪದಲ್ಲಿ ದೀಪದಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಮನೆಯಲ್ಲಿದ್ದವರು ಎಚ್ಚರಗೊಂಡು ಹೊರಗಡೆ ಓಡಿ ಹೋಗಿ, ಚಿರಾಟ ನಡೆಸಿದ್ದರಿಂದ, ಸುತ್ತಮುತ್ತಲಿನ ಜನರು ಓಡಿ ಬಂದು ಬೆಂಕಿಯನ್ನು ನಂದಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ವಿಷಯ ತಿಳಿದ ರಾಯಬಾಗ ತಹಸೀಲ್ದಾರ ಮಹಾದೇವ ಸನಮುರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಸರ್ಕಾರದಿಂದ ಮತ್ತು ಸಿಲಿಂಡರ ಕಂಪನಿಯರಿಂದ ದೊರೆಯುವ ಸೌಲಭ್ಯ ಒದಗಿಸುವುದಾಗಿ ತಿಸಿದ್ದಾರೆ.ಘಟನೆ ಬಗ್ಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲ ಆಗಿರುವುದಿಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 