ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗಳಿಗೆ ಗುತ್ತಿಗೆ ನೌಕರರ ಸಮನ್ವಯ ಸಮಿತಿಯವರು ಮನವಿ
Contract Employees Coordination Committee appeals to 30,000 health department staff
ರಾಯಬಾಗ 06 : ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗಳಿಗೆ ಮಾರಕವಾಗುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ ಹೊರಡಿಸಿದ ಪ್ರಸ್ತಾವನೆಯನ್ನು ಹಿಂಪಡೆಯಲು ಸರ್ಕಾರಕ್ಕೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸುವಂತೆ ಶಾಸಕ ಡಿ.ಎಮ್.ಐಹೊಳೆಯವರಿಗೆ ಶನಿವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಎನ್.ಹೆಚ್.ಎಮ್. ಗುತ್ತಿಗೆ ನೌಕರರ ಸಮನ್ವಯ ಸಮಿತಿಯವರು ಮನವಿ ಸಲ್ಲಿಸಿದರು.ಆರೋಗ್ಯ ಇಲಾಖೆಯಲ್ಲಿ ಅತ್ಯಂತ ಕಡಿಮೆ ವೇತನದಲ್ಲಿ ಕಳೆದ 18-20 ವರ್ಷಗಳಿಂದ ಎನ್.ಎಚ್.ಎಮ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆರೋಗ್ಯ ನೌಕರರ ಭವಿಷ್ಯ ಮತ್ತು ಭದ್ರತೆಗೆ ಮಾರಕವಾಗಿರುವ ಮರು ನೇಮಕಾತಿ ಮಾನವ ಸಂಪನ್ಮೂಲ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.ಡಾ.ಸುರೇಶ ಪಾಟೀಲ, ಡಾ.ಲಕ್ಷ್ಮೀ ಸಂಜುಗೋಳ, ಡಾ.ಶಶಿಕಲಾ ಚೌಗಲಾ, ಡಾ.ಭಾರತಿ ಮಾರಡಿ, ಗೀತಾ ಹಿರೇಕೊಡಿ, ಮಂಜುನಾಥ ಜಾಧವ, ಶರಣಬಸಯ್ಯ ಹೀರೆಮಠ, ಸವಿತ ಚೌಗಲಾ, ನಾಗಿಣಿ ಕಾಂಬಳೆ, ಕವಿತಾ ಶಿಂಗೆ ಮತ್ತು ಎನ್.ಎಚ್.ಎಮ್ ಆರೋಗ್ಯ ಸಿಬ್ಬಂದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 