ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ
Constitution awareness march launched
ರಾಯಬಾಗ 26: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಶಾಸಕ ಡಿ.ಎಮ್.ಐಹೊಳೆಯವರು ಪುಷ್ಪ ನಮನ ಸಲ್ಲಿಸಿ, ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ನಂತರ ಡಾ.ಬಾಬು ಜಗಜೀವನರಾಂ ಸಭಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್-1) ವಿ.ಎಸ್.ಚಂದರಗಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ತಹಶೀಲ್ದಾರ ಮಹಾದೇವ ಸನಮುರಿ ಮಾತನಾಡಿ, ಇಂದಿನ ಯುವಕರು ಸಂವಿಧಾನವನ್ನು ತಪ್ಪದೇ ಓದಿ, ಅದನ್ನು ಚೆನ್ನಾಗಿ ಅರ್ಥೈಯಿಸಿಕೊಳ್ಳಬೇಕು. ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಕಟಿಬದ್ಧವಾಗಿ ಪಾಲಿಸಬೇಕೆಂದರು.
ಪರಶುರಾಮ ಗುಡೋಡಗಿ, ಗಣೇಶ ಕಾಂಬಳೆ, ಕಾಡೇಶ ಐಹೊಳೆ, ಮಹಾವೀರ ಸಾನೆ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ.ಇಒ ಡಾ.ಸುರೇಶ ಕದ್ದು, ತಾ.ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಪಾಟೀಲ, ಡಾ.ಎಮ್.ಬಿ.ಪಾಟೀಲ, ಬಿಸಿಎಮ್ ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ಸಿಡಿಪಿ ಭಾರತಿ ಕಾಂಬಳೆ, ಬಿಸಿಯೂಟ ಅಧಿಕಾರಿ ರವೀಂದ್ರ ಪಾಟೀಲ, ಅಪ್ಪಾಸಾಬ ಕೆಂಗನ್ನವರ, ದೀಲೀಪ ಪಾಯನ್ನವರ, ರಮೇಶ ಕಾಂಬಳೆ, ರಾಕೇಶ ಅವಳೆ, ಲೋಕೇಶ ಕಾಂಬಳೆ, ಏಕನಾಥ ಮಾಚಕನೂರ, ಡಾ.ಆರತಿ ಚಿನಕೋಟಿ, ಅಶೋಕ ಅಂಗಡಿ, ಸುಭಾಷ ಭಜಂತ್ರಿ, ಎಮ್.ಆರ್.ಪಾಟೀಲ, ಎಚ್.ಎಲ್.ಪೂಜೇರಿ, ಬಸವರಾಜಪ್ಪ ಆರ್., ಅಂಬರೀಷ ಕಾಂಬಳೆ, ರವಿ ತಳವಾರ ಸೇರಿ ಅನೇಕರು ಇದ್ದರು. ತಾಲೂಕು ದೈಹಿಕ ಪರೀವಿಕ್ಷಕ ಎಮ್.ಪಿ.ಜಿರಗ್ಯಾಳ ಸ್ವಾಗತಿಸಿ, ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 