ಬಾಗವಾಡಮಠ-ಹೆಗಡೆ ಅವರ ಕೃತಿಗಳ ಬಿಡುಗಡೆ

ಬಾಗವಾಡಮಠ-ಹೆಗಡೆ ಅವರ ಕೃತಿಗಳ ಬಿಡುಗಡೆ  Bhagavad Math-Hegde's works released

                ಬೆಳಗಾವಿ 25: ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ರಾಜೇಶ್ವರಿ ಹೆಗಡೆ ಅವರ ಮೂರು ಕೃತಿ ಮತ್ತು ರಾಣಿ ಭಾಗವಾಡಮಠ ಅವರ ಒಂದು ಕೃತಿಯ ಲೋಕಾರೆ​‍್ಣ ಕಾರ್ಯಕ್ರಮ ಇಂದು ಕನ್ನಡ ಭವನದಲ್ಲಿ ಜರುಗಿತು.  

                  ಶಿಕ್ಷಣ ಇಲಾಖೆ  ನಿ. ಜಂಟಿ ನಿರ್ದೇಶಕ ಬಿ. ಜಿ. ನಾಯಕ ಅವರು ಸಮಾರಂಭ ಉದ್ಘಾಟಿಸಿದರು. ಹಿರಿಯ ಸಾಹಿತಿ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.  ಹೆಗಡೆಯವರ ಮೊದಲ ಹೆಜ್ಜೆ, ಕಾವ್ಯದೀಪ, ಹನಿಹನಿ ಗೊಂಚಲು ಕವನ/ ಚುಟುಕು ಸಂಕಲನಗಳನ್ನು ಡಾ. ಸರಜೂ ಕಾಟಕರ, ಡಾ. ಬಸವರಾಜ ಜಗಜಂಪಿ ಮತ್ತು ಎಲ್‌. ಎಸ್‌. ಶಾಸ್ತ್ರಿ, ಬಾಗವಾಡಮಠರ ಬದುಕೆಂಬುದು ಒಂದು ನಾಟಕ ಕೃತಿಯನ್ನು ಉಮೇಶ ಶಿರಹಟ್ಟಿಮಠ ಅವರು ಬಿಡುಗಡೆ ಮಾಡಿದರು. ಈ ಕೃತಿಗಳ ಕುರಿತು ಭಾರತಿ ಮಠದ, ಹೇಮಾ ಸೊನೊಳಿ, ಬಸವರಾಜ ಗಾರ್ಗಿ ಮಾತನಾಡಿದರು.   

             ಆಶಾ ಯಮಕನಮರ್ಡಿಯವರು ನಾಡಗೀತೆ ಹಾಡಿದರು. ಮುಖ್ಯ ಅತಿಥಿಗಳಾದ ಉದಯಕುಮಾರ, ರಾಜೇಂದ್ರ ಪಾಟೀಲ , ಯ. ರು. ಪಾಟೀಲ ಮೊದಲಾದವರು ಮಾತನಾಡಿದರು. ಕೃತಿಕಾರರಾದ ರಾಜೇಶ್ವರಿ ಹೆಗಡೆ ಮತ್ತು ರಾಣಿ ಬಾಗವಾಡಮಠ ಅವರು ಕೃತಜ್ಞತೆ ಹೇಳಿದರು. ಬಸವರಾಜ ಗಾರ್ಗಿ ನಿರೂಪಣೆಗೈದರು. ಅನೂಪ, ಸಂಧ್ಯಾ, ಡಾ.ನವೀನ ದೊಡವಾಡ, ಅನೂಷಾ, ಜಯಶ್ರೀ ಬಾಗವಾಡಮಠ ಮೊದಲಾದವರು ಭಾಗವಹಿಸಿದ್ದರು.  

         ಸುಮಾ ಕಿತ್ತೂರ ಸ್ವಾಗತಿಸಿದರು. ಪ್ರೊ. ಎಂ. ಎಸ್‌. ಇಂಚಲ, ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ, ಅರ್‌. ಬಿ. ಕಟ್ಟಿ,  ಶ್ರೀರಂಗ ಜೋಶಿ, ಸುನಂದಾ ಎಮ್ಮಿ, ಮುರುಗೇಶ ಶಿವಪೂಜಿ, ನರಗುಂದ, ಶೋಭಾ ಬನಶಂಕರಿ, ಆನಂದ ಪುರಾಣಿಕ, ಎಂ. ಎ.ಪಾಟೀಲ, ಡಾ. ಭವ್ಯ ಸಂಪಗಾರ, ಸುಷ್ಮಾ ಜಗಜಂಪಿ, ಸುಮಾ ಕಾಟಕರ, ಮೊದಲಾದವರು ಉಪಸ್ಥಿತರಿದ್ದರು.