ಡಾಂಬರೀಕರಣ, ಅಂಗನವಾಡಿ ಉದ್ಘಾಟಿಸಿದ: ಶಾಸಕ ಐಹೊಳೆ
Asphalting, Anganwadi inaugurated: MLA Aihole
ರಾಯಬಾಗ, 11 : ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಮಂಗಳವಾರ ಪಟ್ಟಣದ ಹನುಮಾನ ಮಂದಿರದಿಂದ ಸಾಯಿನಗರದ (ರಾಯಬಾಗ-ಜಲಾಲಪೂರ ರಸ್ತೆ) ವರೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ಜಿ.ಪಂ. ಅನುದಾನದಲ್ಲಿ ತಾಲೂಕಿನ ಬಾವನ ಸೌಂದತ್ತಿ ಮತ್ತು ಸೌಂದತ್ತಿವಾಡಿಗಳಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಕಲಿಕೆಗೆ ಮೊದಲ ಹೆಜ್ಜೆಯಾದ ಅಂಗನವಾಡಿ ಕೇಂದ್ರಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಇಲ್ಲಿನ ಸಿಬ್ಬಂದಿ ಮಗುವಿನ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕೆಂದು ತಿಳಿಸಿದರು.ಪಿಡಬ್ಲ್ಯುಡಿ ಎಇಇ ಆರಿ್ಬ.ಮನುವಡ್ಡರ, ಸಿಡಿಪಿಒ ಭಾರತಿ ಕಾಂಬಳೆ, ಸದಾಶಿವ ಘೋರೆ್ಡ, ಪ.ಪಂ ಅಧ್ಯಕ್ಷ ಅಶೋಕ ಅಂಗಡಿ, ಬಾವನ ಸೌಂದತ್ತಿ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಆಜಾದ ತಾಸಿವಾಲೆ, ಪಿಡಿಒ ಎಸ್.ಎಸ್.ನ್ಯಾಮಗೌಡರ, ತಾತ್ಯಾಸಾಬ ಕಾಟೆ, ಶಾಂತಿನಾಥ ಪಾಟೀಲ, ಅನೀಲ ಹಂಜೆ, ಸತ್ಯಪ್ಪ ಬಿಷ್ಠೆ, ದತ್ತಾ ಜಾಧವ್, ಸುರೇಶ ಮಾಳಿ, ಮಹೇಶ ಕರಮಡಿ, ಅಜೀತ ಖೆಮಲಾಪೂರೆ, ರಂಜಾನ ಮಕಾನದಾರ, ಗೋಪಾಲ ಕೊಚೆರಿ, ಮಾರುತಿ ಬಂತೆ, ಮಜ್ಜಿದ್ ಡಾಂಗೆ, ಜಿಯಾವುಲ್ಲಾ ಮುಲ್ಲಾ, ಯುನಸ್ ಮುಲ್ಲಾ, ಮಹೇಶ ಕುಲಗೂಡೆ, ಭಾರತಿ ಲೋಹಾರ, ಸನ್ಮತಿ ಶೆಟ್ಟಿ, ರಾಕೇಶ ಅವಳೆ, ಸುಭಾಷ ಕಾಂಬಳೆ, ಶ್ರೀಧರ ಮೇಗಲಮನಿ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 