ಅನ್ನ ಪರಬ್ರಹ್ಮ ಸ್ವರೂಪ : ನ್ಯಾಯವಾದಿ ಅರವಿಂದ ವ್ಯಾಸ
Anna is the form of Parabrahma: Lawyer Arvind Vyas
ರಬಕವಿ-ಬನಹಟ್ಟಿ 20: ಅನ್ನದ ಕಣಕಣದಲ್ಲೂ ಶಕ್ತಿಯ ಅಂಕುರವಿದೆ. ಶರಣ ಪರಂಪರೆಯಲ್ಲಿ ಕಾಯಕ ದಾಸೋಹಕ್ಕೆ ಆದ್ಯತೆಯಿದೆ. ಇಂದು ದಾಸೋಹ ಪರಂಪರೆ ಮಾಯವಾಗಿದ್ದರೂ ಸೇವಾಮನೋಭಾವನೆ ಹೊಂದಿರುವ ದಾಸೋಹ ಇಂದಿಗೂ ಪಾವಿತ್ರತೆ ಕಾಯ್ದುಕೊಂಡಿದೆ ಎಂಬುದಕ್ಕೆ ನಾಡಿನ ಪ್ರಸಿದ್ಧ ಮಠಗಳು, ದೇಗುಲಗಳಲ್ಲಿ ನಡೆಯುವ ದಾಸೋಹವೇ ಸಾಕ್ಷಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಅರವಿಂದ ವ್ಯಾಸ ಹೇಳಿದರು.
ರಬಕವಿಯ ದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಆಯೋಜಿಸಿದ್ದ 35ನೇ ಅನ್ನದಾಸೋಹ ಸೇವೆಗೆ ಚಾಲನೆ ನೀಡಿ ಸಕಲ ಜೀವರಾಶಿಗೂ ಅನ್ನ ಪರಬ್ರಹ್ಮವಾಗಿದ್ದು, ಕಾಯಕಕ್ಕೆ ಅಣಿಯಾಗಲು ಶಕ್ತಿಮೂಲವಾಗಿದ್ದು, ಪ್ರಸಾದ ರೂಪದಲ್ಲಿ ಪ್ರತಿ ಭಕ್ತರಿಗೂ ದಾಸೋಹ ನಡೆಸುವ ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ತಮ್ಮ ನಿಸ್ವಾರ್ಥತೆಯಿಂದ ಇತರರಿಗೂ ಮಾದರಿಯಾಗಿದ್ದಾರೆಂದರು.
ಧನಲಕ್ಷ್ಮೀ ಸಹಕಾರಿ ಸಂಘದ ನೂತನ ಅಧ್ಯಕ್ಷ ಪ್ರಭು ಉಮದಿ, ಅರವಿಂದ ವ್ಯಾಸರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಶಿವಜಾತ ಉಮದಿ, ಶಿವಾನಂದ ದಾಶ್ಯಾಳ, ರೇವಣ್ಣ ಉಮದಿ, ಮಹಾದೇವಯ್ಯಾ ನಂದಯ್ಯಗೋಳ, ಬಸವರಾಜ ತೊರ್ಲಿ, ವಿಜಯಕುಮಾರ ಹಲಕುರ್ಕಿ, ಎಂ.ಎಸ್.ಗಡೆನ್ನವರ, ಭಾರತ ಗ್ಯಾಸ್ ಸಿಬ್ಬಂದಿ ಸೇರಿದಂತೆ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 