ಅಧಿಕಾರಿಗಳ ಯಡವಟ್ಟಿಗೆ ಜೀವಂತ ವ್ಯಕ್ತಿಯ ಆಧಾರ ಕಾರ್ಡ್ ರದ್ದು,
Aadhaar card of a living person cancelled due to officials' negligence,
ಹೂವಿನಹಡಗಲಿ 17: ವ್ಯಕ್ತಿ ಜೀವಂತ, ಆಧಾರ ಕಾರ್ಡ್ ಮರಣ ( ಆಧಾರ ನಂ.361720 353385 ರದ್ದು) , ಹಾಗೂ ವ್ಯಕ್ತಿ ಮರಣ (ವ್ಯಕ್ತಿ ಸಾವು ) ಆಧಾರ ಜೀವಂತ ನೈಜ ಜೀವನದಲ್ಲಿ ನಡೆದ ಘಟನೆ ತಾಲ್ಲೂಕಿನ ಇಟ್ಟಗಿ ಗ್ರಾಮದಲ್ಲಿ ನಡೆದಿದೆ. ಇಟ್ಟಿಗಿ ಗ್ರಾಮದ ನಿವಾಸಿ ಹಿರಿಲಿಂಗಪ್ಪನವರ ಜಮದಗ್ನಿ ಕಳೆದ 2021ರಲ್ಲಿ ಮೃತಪಟ್ಟಿದ್ದು ಆದರೆ ಆಧಾರ ಕಾರ್ಡ್ ಜೀವಂತವಾಗಿ ದೆ ರದ್ದು ಆಗಿಲ್ಲ ಆದರೆ ಮೃತ ಸಹೋದರ ಹಿರಿಲಿಂಗಪ್ಪನವರ. ಕುಮಾರ ವ್ಯಕ್ತಿ ಜೀವಂತ ಇದ್ದರೂ , ಆಧಾರ್ ಕಾರ್ಡ್ ನಲ್ಲಿ ಮರಣ ( ರದ್ದು) ಎಂದು ತೋರಿಸುತ್ತಿದ್ದು ಇದರಿಂದ ಜಾತಿಯ ಆದಾಯ ಪ್ರಮಾಣ, ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಅಧಿಕಾರಿಗಳ ಯಡವಟ್ಟಿನಿಂದ ವ್ಯಕ್ತಿ ಜೀವಂತ ಇದ್ದರೂ ಆಧಾರ ಕಾರ್ಡ್ ರದ್ದು ಆಗಿದ್ದು . ತಿದ್ದು ಪಡಿ ಮಾಡಿಕೊಡಿ ಎಂದು ತಾಲೂಕು ಕಚೇರಿ ಗೆ ಕಳೆದ ನಾಲ್ಕು ವರ್ಷಗಳಿಂದ ಅಲೆದರೂ ಸಹ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಜತೆಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ ಎಂದು ಪತ್ರಿಕೆ ಜತೆ ಕುಮಾರ್ ಅವರು ತಮ್ಮ ಅಳಲನ್ನು ತೋಡಿಕೊಂಡರು. ಇದೀಗ ಮತ್ತೆ ಆಧಾರ ಕಾರ್ಡ್ ಸರಿಪಡಿಸಿ ಕೊಡಿ ಎಂದು ತಹಶಿಲ್ದಾರರಿಗೆ ಮನವಿ ಮಾಡಿದ್ದಾರೆ .
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 