- ಮಂಜುನಾಥ .ಎಸ್. ಮರಿತಮ್ಮನವರ, ಸವಣೂರ
ದೆಶ ಸುತ್ತು ಕೋಶ ಓದು, ಮೈಮೇಲೆ ಹರಕು ಬಟ್ಟೆಯಿದ್ದರೂ ಕೈಯಲ್ಲೊಂದು ಪುಸ್ತಕವಿರಲಿ, ಪುಸ್ತಕವಿಲ್ಲದ ಮನೆ ಜೀವವಿಲ್ಲದ ದೇಹ ಎರಡೂ ಒಂದೇ, ಪುಸ್ತಕಗಳು ಆಯಾಕಾಲದ ಸಂಸ್ಕ್ರತಿಯ ಜೀವಂತ ಜೀವಾಳಗಳು, ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿದಷ್ಟು ನಾವು ಬುದ್ಧಿಹೀನರಾಗುತ್ತೇವೆ; ಅದೇ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿದಷ್ಟು ನಾವು ಬುದ್ಧಿವಂತರಾಗುತ್ತೇವೆ ಮುಂತಾದ ನುಡಿಮುತ್ತುಗಳು ಪುಸ್ತಕಗಳು ಮಹತ್ವವನ್ನು ಬಿಂಬಿಸುತ್ತವೆ.
ಐತಿಹಾಸಿಕ ಪುಸ್ತಕಗಳನ್ನು ಓದುವುದರಿಂದ ಹಿಂದಿನ ಕಾಲದ ಜನಜೀವನ, ಆಚಾರ- ವಿಚಾರ, ಉಡುಗೆ -ತೊಡುಗೆ, ಸಂಸ್ಕೃತಿ- ಸಂಪ್ರದಾಯಗಳನ್ನು ತಿಳಿದುಕೊಳ್ಳಬಹುದು. ಬೇರೆಬೇರೆ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಿಂದ ಧಾಮರ್ಿಕ ಸಮನ್ವಯ ಸಾಧಿಸಬಹುದು. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು ಬಸವಣ್ಣನವರು ಮುಂತಾದವರ ಜೀವನಚರಿತ್ರೆ ಪುಸ್ತಕಗಳ ಅಧ್ಯಯನದಿಂದ ಅವರ ಸಾಧನೆಗಳನ್ನು ತಿಳಿದುಕೊಂಡು ನಮ್ಮ ಮುಂದಿನ ಸಾಧನೆಗೆ ಪ್ರೇರಣೆ ಪಡೆಯಬಹುದು. ನೀತಿ ಕತೆಗಳನ್ನು ಓದುವ ಮೂಲಕ ಪ್ರೀತಿ, ವಿಶ್ವಾಸ, ದಯೆ ,ಅನುಕಂಪ, ಹೊಂದಾಣಿಕೆಯ ಮನೋಭಾವಗಳನ್ನು ಬೆಳೆಸಿಕೊಳ್ಳಬಹುದು. ವಿದ್ಯಾಥರ್ಿ- ಸ್ಪಧರ್ಾಥರ್ಿಗಳು ಜ್ಞಾನ- ವಿಜ್ಞಾನ ಪುಸ್ತಕಗಳ ಅಧ್ಯಯನದಿಂದ ಇಟ್ಟುಕೊಂಡ ಗುರಿಯನ್ನು ಸಾಧಿಸಬಹುದು. ವ್ಯಕ್ತಿತ್ವವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನದಿಂದ ತಾಳ್ಮೆ, ಏಕಾಗ್ರತೆ, ಹಿಡಿದ ಕಾರ್ಯವನ್ನು ಮುಗಿಸುವ ಎದೆಗಾರಿಕೆ, ಎಲ್ಲರನ್ನು ಪ್ರೀತಿಸುವ ಮನೋಭಾವಗಳು ಮೆಳೈಸುತ್ತವೆ. ಸಾಹಿತ್ಯ ಕೃತಿಗಳ ಅಧ್ಯಯನದಿಂದ ರಸಾನುಭಾವವುಂಟಾಗುತ್ತದೆ. ಪುಸ್ತಕಗಳು ನಮ್ಮ ಅಂತರಂಗ ಹಾಗೂ ಬಹಿರಂಗದ ಜ್ಞಾನಮಾರ್ಗಗಳ ಕಡೆ ನಮ್ಮ ಗಮನ ಸೆಳೆಯುತ್ತವೆ. ಪುಸ್ತಕಗಳ ಅಧ್ಯಯನವು ಕಾಲ, ದೇಶ, ಲಿಂಗ, ವಯಸ್ಸುಗಳ ಮೇರೆ ಮೀರಿ ಎಲ್ಲರನ್ನೂ ಆವರಿಸಿಬಿಡುವ ಅಧ್ಭುತ ಶಕ್ತಿಮಾರ್ಗ. ಪುಸ್ತಕಗಳ ಅಧ್ಯಯನದಿಂದ ಪದಸಂಪತ್ತು, ಜ್ಞಾನಸಂಪತ್ತು ಹೆಚ್ಚುತ್ತದೆ, ಓದುಗಾರಿಕೆಯಿಂದ ವಿರಾಮಕಾಲದ ಸದುಪಯೋಗವಾಗುತ್ತದೆ. ಉತ್ತಮ ಹವ್ಯಾಸಗಳು ರೂಢಿಗತವಾಗುತ್ತವೆ.
ಸಾರ್ವಜನಿಕ ಗ್ರಂಥಾಲಯಗಳು ಹೀಗಿರಲಿ:
ಗ್ರಂಥಾಲಯಗಳು ವಿದ್ಯಾಥರ್ಿ ಸ್ಪಧರ್ಾಥರ್ಿಗಳ ಬದುಕನ್ನು ರೂಪಿಸುವ ದೇವಾಲಯಗಳಿದ್ದಂತೆ. ನಿವೃತ್ತಿ ಹೊಂದಿದ ಜನರಿಗೆ ಆಶ್ರಯತಾಣವಾಗಿರುವ ಗ್ರಂಥಾಲಯಗಳು ಉಪನ್ಯಾಸಕರ, ಶಿಕ್ಷಕರ ಆವಾಸಸ್ಥಾನಗಳಾಗಿವೆ. ಗ್ರಂಥಾಲಯಗಳು ಗಾಳಿ, ಬೆಳಕುಗಳಿಂದ ಕೂಡಿದ್ದು ,ಶಾಂತವಾಗಿದ್ದು, ಮೊಬೈಲ್ ರಿಂಗುಗಳಿಂದ ದೂರವಾಗಿರಬೇಕು. ಅಲ್ಲಿ ದಿನಪತ್ರಿಕೆ, ವಾರಪತ್ರಿಕೆಗಳಿಂದ ಹಿಡಿದು ವಾಷರ್ಿಕ ಸಂಚಿಕೆಗಳು ಕಡ್ಡಾಯವಾಗಿ ದೊರೆಯುತ್ತಿರಬೇಕು. ವಿದ್ಯಾಥರ್ಿಗಳು, ಸ್ಪದರ್ಾಳುಗಳು, ಮಹಿಳೆಯರು ವೃದ್ಧರು... ಹೀಗೆ ಎಲ್ಲರ ಮನತಣಿಸುವ ಪುಸ್ತಕ- ಮ್ಯಾಗ್ಝಿನ್ಗಳನ್ನು ಒಳಗೊಂಡಿರಬೇಕು. ವಿವಿಧ ವéಿಷಯಗಳಿಗೆ ಪ್ರತ್ಯೇಕ ವಿಭಾಗಗಳಿದ್ದರೆ ಉತ್ತಮ. ಪುಸ್ತಕಗಳ ಆಯ್ಕೆಗೆ ಮತ್ತು ಓದುಗಾರಿಕೆಗೆ ಗ್ರಂಥಾಲಯದ ಸಿಬ್ಬಂದಿ ಸಹಾಯ ಹಸ್ತ ನೀಡಬೇಕು. ಗ್ರಂಥಾಲಯಗಳಲ್ಲಿ ಓದುಗರು ಕೂಡ ಶಾಂತವಾಗಿದ್ದು ಉಳಿದ ಓದುಗರಿಗೆ ತೊಂದರೆಯನ್ನುಂಟು ಮಾಡುವ ರೀತಿಯಲ್ಲಿ ವತರ್ಿಸಬಾರದು. ಪುಸ್ತಕಗಳನ್ನು ಕದಿಯಬಾರದು, ಬಣ್ಣಬಣ್ಣದ ಫೋಟೋಗಳನ್ನು ಕತ್ತರಿಸಿಕೊಂಡು ಹೋಗಬಾರದು.
ನಾವಿಂದು ದಿನನಿತ್ಯದ ಸಾಮಾನು ಖರೀದಿಗಾಗಿ, ಊಟೋಪಚಾರಕ್ಕಾಗಿ, ಬಟ್ಟೆ ಬರೆ ಖರೀದಿಸಲು ಸಾವಿರಾರು ರೂಪಾಯಿ ಖಚರ್ುಮಾಡಿದರೂ 100 ರೂ ಪುಸ್ತಕ ಖರೀದಿಗೆ ಐದಾರು ಬಾರಿ ವಿಚಾರಿಸುತ್ತೇವೆ.ನಾಗರಿಕತೆಯ ನಾಗಾಲೋಟಕ್ಕೆ ಬೆಂಬತ್ತಿ ಬಹುತೇಕ ಯುವಪೀಳಿಗೆ ಇಂದು ಮೊಬೈಲ್, ವಾಟ್ಸಆ್ಯಪ್ಗಳ ದಾಸರಾಗಿಬಿಟ್ಟಿದ್ದಾರೆ. ಕೆಲವು ಯುವಜನತೆ ಅಪರಾಧಿಸಂಬಂಧಿ ಪುಸ್ತಕ, ಲೈಂಗಿಕ ಪುಸ್ತಕ ಓದುವಿಕೆಯಿಂದ ದಾರಿ ತಪುತ್ತಿದ್ದಾರೆ. ಈ ದುಷ್ಟಪದ್ಧತಿಗೆ ಇತಿಶ್ರೀ ಹಾಡಬೇಕಾಗಿದೆ. ನಾವಿಂದು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಖರೀದಿಸಿ ಓದಬೇಕು. ಬೇರೆಬೇರೆ ಊರಿಗೆ ಹೋದಾಗ ಪುಸ್ತಕಾಲಯಗಳಿಗೆ ಭೇಟಿಕೊಟ್ಟು ಹೊಸಬಗೆಯ, ವಿಶಿಷ್ಟ ಪುಸ್ತಕಗಳನ್ನು ಕೊಂಡು ತಂದು ಮನೆಯಲ್ಲೇ ಪುಟ್ಟ ಗ್ರಂಥಾಲಯ ನಿಮರ್ಿಸಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಕೂಡ ಪುಸ್ತಕ ಓದುವ ಉತ್ತಮ ಹವ್ಯಸವನ್ನು ಬೆಳೆಸಿಕೊಳ್ಳುತ್ತಾರೆ.