ಬಸವಕೇಂದ್ರದಿಂದ ವಚನ ಶ್ರಾವಣ: ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ಕಾರ್ಯಕ್ರಮ

ಬಸವಕೇಂದ್ರದಿಂದ ವಚನ ಶ್ರಾವಣ: ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ಕಾರ್ಯಕ್ರಮ  'Vachana Shravana' by Basava Kendra: Program from August 16 to September 13

ಲೋಕದರ್ಶನ ವರದಿ 

ಹುಬ್ಬಳ್ಳಿ 01 : ಬಸವಕೇಂದ್ರದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಡೆಯುವ “ವಚನ ಶ್ರಾವಣ” ಕಾರ್ಯಕ್ರಮವು ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿದೆ.  ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳ ಸುಮಾರು 35ರಿಂದ 40 ಸ್ಥಳಗಳಲ್ಲಿ ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಶರಣರ ವಚನಗಳ ಕುರಿತು ಅನುಭಾವಿಗಳಿಂದ ವಿಶ್ಲೇಷಣೆ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  

ತಮ್ಮ ಮನೆ, ಓಣಿ, ಸಮುದಾಯ ಭವನ ಅಥವಾ ದೇವಸ್ಥಾನಗಳಲ್ಲಿ ಕಾರ್ಯಕ್ರಮ ನಡೆಸಲು ಆಸಕ್ತರು ಬಸವಕೇಂದ್ರದ ಅಧ್ಯಕ್ಷ ಪ್ರೊ. ಬಿ. ಹಳಾಳ (8073244536), ಕಾರ್ಯಾಧ್ಯಕ್ಷ ಪ್ರೊ. ಎಸ್‌.ವಿ. ಪಟ್ಟಣಶೆಟ್ಟಿ (9482611417), ಉಪಾಧ್ಯಕ್ಷ ಬಸವರಾಜ್ ಎಂ. ಲಿಂಗಶೆಟ್ಟರ್ (8217262537) ಅಥವಾ ಕಾರ್ಯದರ್ಶಿ ಕೆ.ಎಸ್‌. ಇನಾಮತಿ (9480313371) ಅವರನ್ನು ಸಂಪರ್ಕಿಸಬಹುದು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ್ ಡಿ. ಹೊರಕೇರಿ ತಿಳಿಸಿದ್ದಾರೆ.  

ಶ್ರಾವಣ ಮಾಸದಲ್ಲಿ ವಚನಗಳ ಅಧ್ಯಯನ, ಶ್ರವಣ ಮತ್ತು ಆಚರಣೆಯಿಂದ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ಸಂದೇಶಗಳು ಇಂದಿನ ಸಮಾಜಕ್ಕೂ ದಾರೀದೀಪವಾಗಿವೆ ಎಂದು ಅವರು ಹೇಳಿದ್ದಾರೆ.