'ಮನೆಯ ಕಡೆಗೂ ಗಮನ ಕೊಡಮ್ಮ’ ಕಿರಿಕ್ ಬೆಡಗಿಗೆ ಅಪ್ಪನ ಮನವಿ!
ಬೆಂಗಳೂರು, ೧೩ ಟಾಲಿವುಡ್,
ಕಾಲಿವುಡ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಚಿತ್ರೀಕರಣಕ್ಕಾಗಿ
ದಿನಕ್ಕೊಂದು ರಾಜ್ಯಕ್ಕೆ ಓಡಾಡುತ್ತಿದ್ದಾರೆ ಕುಟುಂಬದವರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಹೀಗಾಗಿ, ’ಮನೆಯ ಕಡೆಗೂ ಗಮನ ಕೊಡು ಮಗಳೇ’ ಎಂದು ಅವರ ತಂದೆ
ಹೇಳಿದ್ದಾರೆಶನಿವಾರ ಧ್ರುವ ಸರ್ಜಾ
ಅಭಿನಯದ‘ಪೊಗರು’ ಶೂಟಿಂಗ್‌ನಲ್ಲಿದ್ದ ರಶ್ಮಿಕಾ, ಭಾನುವಾರ ಚೆನ್ನೈಗೆ ಹೋದರು. ಸೋಮವಾರ ಚೆನ್ನೈಯಿಂದ
ನೇರವಾಗಿ ಹೈದರಾಬಾದ್‌ಗೆ ಹೋಗಿದ್ದಾರೆ. ಹೀಗೆ ರಶ್ಮಿಕಾ ದಿನಕ್ಕೊಂದು ರಾಜ್ಯವನ್ನು ಸುತ್ತುತ್ತಿರುವುದರಿಂದ ರಶ್ಮಿಕಾರಿಗೆ ತಮ್ಮ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಇದರಿಂದ
ಬೇಸರಗೊಂಡಿರುವ ಅವರ ತಂದೆ, “ನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ವ ಮನೆಯ ಕಡೆಗೂ ಗಮನ
ಕೊಡು ಮಗಳೇ” ಎಂದು ಹೇಳಿದ್ದಾರೆ.ಈ ಬಗ್ಗೆ ರಶ್ಮಿಕಾ
ಅವರ ತಾಯಿ ಪ್ರತಿಕ್ರಿಯಿಸಿ, ನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲೇ ಇರುತ್ತೇನೆ. ಆದರೆ ಆಕೆಯ ತಂದೆ
ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಅನೇಕ ಚಿತ್ರಗಳಲ್ಲಿ ನಟಿಸುತ್ತಿರುವುದನ್ನು
ನೋಡಿ ನಾನೇ ಆಶ್ಚರ್ಯ ಪಡುತ್ತಿದ್ದೇನೆ. ರಶ್ಮಿಕಾ ನಟಿಸಿದ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆ
ಆಗಲಿದೆ. ಹೀಗಾಗಿ ಆ ವರ್ಷ ಅವಳಿಗೆ ತುಂಬಾ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಉತ್ತಮ ಪಾತ್ರಗಳು
ಸಿಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ರಶ್ಮಿಕಾ
ಮಂದಣ್ಣ, ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದಾರಂತೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 