“ಜಾನಪದ ಜಾತ್ರೆ ಮತ್ತು ಸಣ್ಣಾಟಗಳ ಸಮ್ಮೇಳನ-2026”

 “ಜಾನಪದ ಜಾತ್ರೆ ಮತ್ತು ಸಣ್ಣಾಟಗಳ ಸಮ್ಮೇಳನ-2026” “Folklore Fair and Dance Conference-2026”

ಲೋಕದರ್ಶನ ವರದಿ 

ಚಂದರಗಿ 19 : ಸಿದ್ಧಾರೂಡ ಮಹಿಳಾ ಕಲಾ ಸಂಘ, ಜೋಕಾನಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಮ್‌. ಚಂದರಗಿ ಗ್ರಾಮದಲ್ಲಿ “ಜಾನಪದ ಜಾತ್ರೆ ಮತ್ತು ಸಣ್ಣಾಟಗಳ ಸಮ್ಮೇಳನ-2026” ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.  

ಕಾರ್ಯಕ್ರಮದ ಉದ್ಘಾಟನೆಯನ್ನು ಹಣಮಂತ ಬಸಪ್ಪ ಭಜನ್ನವರ, ಗ್ರಾಮ ಪಂಚಾಯತ ಹಿರಿಯರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲ್ಲಪ್ಪ ರಾಮಪ್ಪ ಮಲ್ಲಾಡಿ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಚನಬಸಪ್ಪ ರಾಮವ್ವ ಅಕ್ಕಿಸಾಗರ, ಮಾರುತಿ ಭರಮಪ್ಪ ಕರಿಗಾರ, ಉದ್ದಪ್ಪ ರಾಮಪ್ಪ ಕೌಜಲಗಿ, ಈರ​‍್ಪ ಗಿರೆಪ್ಪ ಮಲ್ಲಾಡಿ ಗೌಡಪ್ಪ ಯ ಕರಿಗೌಡ್ರ ಇವರು ಭಾಗವಹಿಸಿದ್ದರು. 

ಸಂಸ್ಥೆಯ ಅಧ್ಯಕ್ಷರಾದ ಯಮನವ್ವ ಜೋಕಾನಟ್ಟಿ ಇವರು ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಹಲವಾರು ಕಲಾವದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಜೀವನಕ್ಕೂ ಒಂದು ದಾರಿಯಾದಂತೆ ಆಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪಾರಿಜಾತ, ರಾಧಾ ಕೃಷ್ಣಾ, ಸಂಗ್ಯಾ-ಬಾಳ್ಯಾ ಸಣ್ಣಾಟ, ನಿಜಗುಣಿ ಶಿವಯೋಗಿ, ಜಾನಪದ ಸಂಗೀತ, ಸೋಬಾನ ಪದ, ಬಿಸುವಕಲ್ಲಿನ ಪದ, ಚರ್ಮವಾದ್ಯ, ಕೋಲಾಟ, ಜಾನಪದ ನೃತ್ಯ, ಕರಡಿ ಮಜಲು, ಡೊಳ್ಳಿನ ಪದಗಳು, ಹಂತಿ ಪದಗಳು, ಹಾಗೂ ಭಜನಾ ಪದಗಳು ಜರುಗಿದವು. ಸ್ವಾಗತವನ್ನು ಯಮನವ್ವ ಜೋಕಾನಟ್ಟಿ ಹಾಗೂ ವಂದಣಾರೆ​‍್ಣಯನ್ನು ಅಕ್ಕಮಹಾದೇವಿ ಮಾದರ ಮಾಡಿದರು.