ಗದಗದಲ್ಲಿ ‘ಸಂಗೀತ ಗಂಗಾ’ ಕಾರ್ಯಕ್ರಮ: ಗಾನಕೋಗಿಲೆ ಎಸ್‌. ಜಾನಕಿಗೆ ಸ್ವರನಮನ

ಗದಗದಲ್ಲಿ ‘ಸಂಗೀತ ಗಂಗಾ’ ಕಾರ್ಯಕ್ರಮ: ಗಾನಕೋಗಿಲೆ ಎಸ್‌. ಜಾನಕಿಗೆ ಸ್ವರನಮನ   ‘Sangeeta Ganga’ program in Gadag: Musical tribute to ‘Nightingale’ S. Janaki

ಲೋಕದರ್ಶನ ವರದಿ 

ಗದಗ 3 : ನಗರದ ಸಂಕೇತ ಸಂಕೀರ್ಣದಲ್ಲಿ “ಸಂಗೀತ ಗಂಗಾ” ಪ್ರಶಸ್ತಿ ಪುರಸ್ಕೃತ ದಿ. ಡಆ. ಎಸ್‌. ಜಾನಕಿ ಅವರಿಗೆ ಸ್ವರನಮನ ಕಾರ್ಯಕ್ರಮ ವೈ. ಆರ್‌. ಹಿರೇಗೌಡರ ನೇತೃತ್ವದಲ್ಲಿ ಜರುಗಿತು. ಸಾನಿಧ್ಯವನ್ನು ಪೂಜ್ಯ ಶಂಕರಾನಂದ ಸ್ವಾಮಿಗಳು ಮುಕ್ಕಣ್ಣೇಶ್ವರಮಠ, ಗದಗ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ರಾಧಿಕಾ ಕುಲಕರ್ಣಿಯವರು ಆರೋಗ್ಯಕರ ಮನಸ್ಸಿಗೆ ಸಂಗೀತ ಅವಶ್ಯ ಎಂದು ನುಡಿದು ಸುಶ್ರಾವ್ಯವಾಗಿ ಹಾಡಿದರು.

ಅತಿಥಿಗಳಾಗಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲರವರು ಸಂಗೀತ ನಮ್ಮೆಲ್ಲರ ಜೀವನ ಎಂದು ನುಡಿದರು. ಇನ್ನೋರ್ವ ಅತಿಥಿಗಳಾದ ಸಹ ಶಿಕ್ಷಕರು ಆದ ಗೀತಾಂಜಲಿ ಗೌಡರ ಒಂದಲ್ಲ ಎರಡು ಹಾಡನ್ನು ಹಾಡಿ ರಂಜಿಸಿದರು. ಅಧ್ಯಕ್ಷತೆಯನ್ನು ಐ.ಬಿ. ಬೆನಕೊಪ್ಪ ನಿವೃತ್ತ ಉಪ ನಿರ್ದೇಶಕರು ಮನುಷ್ಯ ಆರೋಗ್ಯಕರ ವಾಗಿರಬೇಕೆಂದರೆ ಸಂಗೀತ ಇರಲೇಬೇಕು.

ಇದು ಒಂದು ಭಾವಪೂರ್ಣ ಕಾರ್ಯಕ್ರಮ ನಲವತ್ತು ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡುವ ಮೂಲಕ ಗಾಯಕಿ ಎಸ್‌. ಜಾನಕಿಯವರು ಎಲ್ಲರ ಮನೆಮನಗಳಲ್ಲಿ ನೆಲೆನಿಂತಿದ್ದಾರೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಮಹಿಳಾ ಅಟೋ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ರೇಖಾ ಮಲ್ಲಿಕಾರ್ಜುನರಿಗೆ ಸನ್ಮಾನ ಜರುಗಿತು. ಸನ್ಮಾನೋತ್ತರ ನುಡಿಗಳನ್ನಾಡಿದರು. 

ಸಂಗಮೇಶ್ವರ ಪಾಟೀಲ ಪ್ರಾರ್ಥನೆಯೊಂದಿಗೆ ಡಿ.ಎಸ್‌. ನಾಯಕ ಉಪನ್ಯಾಸಕರು ನಿರೂಪಿಸಿದರು. ವೈ. ಆರ್‌. ಹಿರೇಗೌಡರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಎಂ. ಮಾರನಬಸರಿ ವಂದಿಸಿದರು. 

ಗಣೇಶಸಿಂಗ್ ಬ್ಯಾಳಿ, ಕೆ.ಎಂ. ಮೂಲಿಮನಿ ದತ್ತಪ್ರಸನ್ನ ಪಾಟೀಲ, ಸಿ.ಎಂ. ಮಾರನಬಸರಿ, ಮಂಜುಳಾ ವೆಂಕಟೇಶಯ್ಯ, ಎಸ್‌.ಎಸ್‌. ಬಡಿಗೇರ, ವ್ಹಿ.ಜಿ. ಕಾಂಬಳೇಕರ, ಎಸ್‌.ಎ. ಬಾಣದ, ಸತೀಶ ಚನ್ನಪ್ಪಗೌಡರ, ಸಂಗೀತಾ ಉತ್ತರಕರ, ಲತಾ ಜಂಗಮನಿ, ಮಾಲಾ ಶಿರೋಳ, ರಾಜೇಶ್ವರಿ ರಾಜೂರ, ರುಕ್ಮಿಣಿ ಪಾಟೀಲ, ಮೈತ್ರಾ ಪಾಟೀಲ, ಅನ್ನಪೂರ್ಣ ಹಿರೇಮಠ, ಅನಸೂಯ ರಾಮರಡ್ಡಿ, ಹೇಮಾ ಹೆಬಸೂರ, ಜಯಶ್ರೀ ಹಿರೇಮಠ, ಅಕ್ಕಮ್ಮ ಗುಡ್ಡಿಮಠ, ವಿದ್ಯಾ ಮಾನೆ, ಮಲ್ಲಿಕಾರ್ಜುನ ಡಂಬಳ, ರತ್ನಾ ಪುರಂತರ, ಶ್ವೇತಾ ಕಿರೇಸೂರ, ಶರ್ಮಿಳಾ ಕಿರೇಸೂರ, ಪುಷ್ಪಾ ಕಿರೇಸೂರ ಸಕ್ಕು ದುರದುಂಡಿ, ಮಂಜುಳಾ ಅಣ್ಣಿಗೇರಿ, ಸುರೇಶ ವಾಘ್ಮೋರೆ ಉಪಸ್ಥಿತರಿದ್ದರು.