ಹೊಲದಲ್ಲಿ ವಿದ್ಯುತ್ ತಗುಲಿ ಯುವ ರೈತ ಸಾವು
ಲೋಕದರ್ಶನ ವರದಿ
ಹೂವಿನಹಡಗಲಿ 19: ಹೋಲದಲ್ಲಿರುವ ಮೋಟರ್ ಪಂಪಸೆಟ್ ಚಾಲು ಮಾಡುವಾಗ ವಿದ್ಯುತ್ ತಗುಲಿ ಮಹಾಜನದಹಳ್ಳಿ ಗ್ರಾಮದ ಯುವ ರೈತ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಘಟನಾ ಸ್ಥಳಕ್ಕೆ ಇಟ್ಟಿಗಿ ಪಿಎಸ್‌ಐ ಭೇಟಿ ನೀಡಿದರು.ತಾಲೂಕಿನ ಮಹಾಜನದಹಳ್ಳಿ ಗ್ರಾಮದ ಪ್ರವೀಣ್ (25)ಮೃತರು , ಪ್ರವೀಣ್ ಅವರು ಸಂಜೆ 6ಗಂಟೆಗೆ ಜಮೀನಿನಲ್ಲಿ ವಿದ್ಯುತ್ ಪಂಪಸೆಟ್ ನಲ್ಲಿ ವಿದ್ಯುತ್ ಸರಿಪಡಿಸಲು ಹೋದಾಗ ವಿದ್ಯುತ್ ತಗುಲಿದೆ. ಆಘಾತಕ್ಕೆ ತುತ್ತಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಬಗ್ಗೆ ತಾಲೂಕಿನ ಇಟ್ಟಿಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.