ಉತ್ತಮ ಆರೋಗ್ಯಕ್ಕೆ ಯೋಗವೇ ಮದ್ದು: ನೀಲಣ್ಣವರ
Yoga is the medicine for good health: Nilannavara
ರನ್ನ ಬೆಳಗಲಿ 19: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ರನ್ನ ಬೆಳಗಲಿಯಲ್ಲಿ ಮಂಗಳವಾರ ದಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಯುಷ್ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಚಾಯತ, ಬಾಗಲಕೋಟೆ, ಜಿಲ್ಲಾ ಆಯುಷ್ ಇಲಾಖೆ, ಬಾಗಲಕೋಟೆ ಮತ್ತು ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ 11ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ - 2025 ಅಂಗವಾಗಿ ಧನುಷ್ ಯೋಗೋತ್ಸವ ಶಿಷ್ಟಾಚಾರ ಯೋಗಾಭ್ಯಾಸ ಪೂರ್ವಭಾವಿ ಕಾರ್ಯಕ್ರಮ ಜರುಗಿತು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಉತ್ತಮ ಆರೋಗ್ಯಕ್ಕೆ ಯೋಗವೇ ಮದ್ದು,ಒತ್ತಡದ ಜೀವನದಲ್ಲಿ ನಿತ್ಯ ಯೋಗವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಯೋಗವೇ ವರದಾನವಾಗಿದೆ ಎಂದು ತಿಳಿಸಿ, ಆಸನ, ಪ್ರಾಣಾಯಾಮಗಳನ್ನು ಮಾಡಿಸುವುದರ ಜೊತೆಗೆ ಅದರ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಎಮ್ ವಿ ಸೊಪ್ಪಿಮಠ ಪ್ರಾಚಾರ್ಯರು ಯೋಗ ತರಬೇತಿದಾರರು ತಿಳಿಸಿಕೊಟ್ಟ ಆಸನ, ಪ್ರಾಣಾಯಾಮಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ, ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯ ವಾಗುತ್ತದೆ ಎಂದು ಹೇಳಿದರು. ಡಾ. ಆರ್ ಬಿ ಅನ್ಸಾರಿ ಆಯುಷ್ ವೈದ್ಯಾಧಿಕಾರಿಗಳು ಧನುಷ್ ಯೋಗ ಕಾರ್ಯಕ್ರಮವು ಬಗ್ಗೆ ಮಾಹಿತಿ ನೀಡಿದರು.
ಆಯುಷ್ ವೈದ್ಯಾಧಿಕಾರಿ ಡಾ. ಎಸ್ ಎಸ್ ಡರ್ಬಿ,ಡಾ. ಶೋಭಾ ಬೀಕ್ಷಾವತಿಮಠ, ಯೋಗ ಶಿಕ್ಷಕಿ ರತ್ನಾ ಪಾಶ್ಚಾಪೂರ, ಶಿಕ್ಷಕ ವೃಂದದವರಾದ ಸುರೇಶಕುಮಾರ ಮುದಕಣ್ಣವರ, ರಾಹುಲ ಸಾಗರ, ಎಂ ಬಿ ತೇರದಾಳ, ಶೃತಿ ಪೋಲಿಸನವರ, ಗಜಾನನ ಗಾಜಾರ, ಕಾಂತು ಕಲಶೆಟ್ಟಿ, ವಿಲಾಸ ಎಣ್ಣಿ, ಜಿ ಎಂ ಮಠಪತಿ, ಕೆ ಎಸ್ ಉಳ್ಳಾಗಡ್ಡಿ, ಶಿವಶಂಕರಯ್ಯ ವೀರಕ್ತಮಠ, ಯಲ್ಲಪ್ಪ ಶಿರಗಾಂವಿ, ಎನ್ ಆಯ್ ಜಂಗಾಲಿ, ಶಿಲ್ಪಾ ಹಾರೂಗೇರಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಆಯುಷ್ ಇಲಾಖೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 