ಯೋಗ ದಿನಾಚರಣೆ ಪ್ರಯುಕ್ತ ಯೋಗ ಮತ್ತು ಯೋಗಾಸನ ಶಿಬಿರ: ಪಾಲ್ಗೊಳ್ಳಲು ಯೋಗಿನಿ ಅಕ್ಕ ಕರೆ
Yoga and Yogasana Camp on the occasion of Yoga Day: Yogini Akka invites you to participate
ಕೊಪ್ಪಳ 12: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇದೇ ದಿ/ 15 ರಿಂದ ದಿನಾಂಕ 30 ರ ವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7:30 ಗಂಟೆ ವರೆಗೆ ನಗರದ ಸಾಲಾರ್ ಜಂಗ್ ರಸ್ತೆ ದೇವರಾಜ್ ಅರಸ್ ಕಾಲೋನಿ, ಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜರುಗಲಿದೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಮನಸ್ಸಿನ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಗೊಳಿಸುವುದು, ಮನಸ್ಸಿನ ಒತ್ತಡ ಮುಕ್ತತೆಗೆ ವಿಧಿ ತಿಳಿಸುವುದು, ಚಿಂತೆ ಮತ್ತು ಅನಾವಶ್ಯಕ ಚಿಂತೆಗಳಿಂದ ಮುಕ್ತ ಮಾಡಿಸುವುದು, ಬೆನ್ನು ನೋವು, ಕಾಲಿನ ,ಗಂಟು ನೋವುಗಳ ಉಪಶಮನ ತಿಳಿಸುವುದು,
ಹೈ ಬಿ, ಪಿ ,ಡಯಾಬಿಟಿಸ್, ಅಸ್ತಮಾ, ಅಸಿಡಿಟಿ ನಿಯಂತ್ರಣ ಗೊಳಿಸುವುದು, ಮೂಲವ್ಯಾಧಿ, ಮೈಗ್ರೇನ್ ,ಹೃದಯ ರೋಗಗಳನ್ನು ಹತೋಟಿಗೆ ತರುವುದು, ಮೌಲ್ಯಯುಕ್ತ ಸುಖ ಸಂಸಾರ ನಿರ್ಮಾಣಗೊಳಿಸುವುದು, ಆರೋಗ್ಯ ಕಂಠಕವಾಗಿರುವ ದುಶ್ಚಟ ದಿಂದ ಮುಕ್ತಗೊಳಿಸುವುದು, ಯೋಗ ,ಯೋಗಾಸನ, ಪ್ರಾಣಾಯಾಮ, ಧ್ಯಾನ ದಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಅತ್ಯಂತ ಸಹಕಾರಿ ಆಗಿದ್ದು ಸದರಿ ಶಿಬಿರದಲ್ಲಿ ಪಾಲ್ಗೊಂಡು ಇದರ ಉಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಈಶ್ವರಿ ವಿಶ್ವವಿದ್ಯಾಲಯ ದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಬ್ರಹ್ಮಕುಮಾರಿ ಸ್ನೇಹ ಅಕ್ಕ ಉಪಸ್ಥಿತರಿದ್ದರು,
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 