ಯಡೂರ: ಭಾರತೀಯ ಸೈನಿಕರ ಯಶಸ್ಸಿಗೆ ಮಹಾಮೃತ್ಯುಂಜಯ ಹೋಮ
Yadoor: Mahamrityunjaya Homa for the success of Indian soldiers
ಚಿಕ್ಕೋಡಿ 10: ಪಾಕಿಸ್ತಾನ ವಿರುದ್ಧ ಯುದ್ಧದ ಗೆಲುವಿಗಾಗಿ ಭಾರತೀಯ ಸೈನಿಕರಿಗಾಗಿ ಯಡೂರ ಗ್ರಾಮದ ವೀರಭದ್ರೇಶ್ವರ ಗರ್ಭಗುಡಿಯ ಮುಂಭಾಗದಲ್ಲಿ ಮಹಾಮೃತ್ಯುಂಜಯ ಹೋಮ ಹಾಗೂ ಜಯಾದಿ ಹೋಮವನ್ನು ನೆರವೇರಿಸಿದರು.
ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ಸಮರ ಪ್ರಾರಂಭವಾಗಿದೆ. ಭಾರತದ ಸೈನಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು. ಅವರ ಜೀವಕ್ಕೆ ಆಪತ್ತು ಬರಬಾರದು ಎನ್ನುವ ಉದ್ದೇಶದಿಂದ ಸಿದ್ದಲಿಂಗೇಶ್ವರ ಗುರುಕುಲ ಪಾಠಶಾಲೆಯ ಮುಖ್ಯೋಪಾಧ್ಯಾಯ ಶ್ರೀಶೈಲ ಶಾಸ್ತ್ರಿಗಳ ನೇತೃತ್ವದಲ್ಲಿ ಪಾಠಶಾಲೆಯ ಮಕ್ಕಳು, ವೇದ ಪಂಡಿತರು ಸೇರಿಕೊಂಡು ಜಯಾಧಿ ಹೋಮ ಹಾಗೂ ಮಹಾಮೃತ್ಯುಂಜಯ ಹೋಮವನ್ನು ಮಾಡಲಾಯಿತು. ಬಳಿಕ ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂದು ವೀರಭದ್ರೇಶ್ವರ ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.
ರೇಣುಕ ದೇವರು, ಅಭಿಷೇಕ ದೇವರು, ನರಸಗೌಡ ಕಮತೆ, ಅಡವಯ್ಯ ಅರಳಿಕಟ್ಟಿಮಠ, ಮನೋಹರ ಪುಠಾಣೆ, ಮುತ್ತು ಮಠದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 