ಶಕ್ತಿ ಯೋಜನೆ ಸಂಭ್ರಮದಲ್ಲಿ ಬನಹಟ್ಟಿ-ಬೆಳಗಾವಿ ಬಸ್‌ಗೆ ಪೂಜೆ ಸಲ್ಲಿಕೆ
Worship of Banahati-Belgaum bus in celebration of Shakti Yojana
ಶಕ್ತಿ ಯೋಜನೆ ಸಂಭ್ರಮದಲ್ಲಿ ಬನಹಟ್ಟಿ-ಬೆಳಗಾವಿ ಬಸ್‌ಗೆ ಪೂಜೆ ಸಲ್ಲಿಕೆ
ರಾಯಬಾಗ, 14 ; ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. 500 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿ, ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಸೋಮವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಬನಹಟ್ಟಿ-ಬೆಳಗಾವಿ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಮಾತನಾಡಿದ ಅವರು, ಎಲ್ಲ ವರ್ಗದ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದು, ರಾಜ್ಯಾದ್ಯಾಂತ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಸರ್ಕಾರದ ಕಾರ್ಯಕ್ಕೆ ಎಲ್ಲ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಬಸ್‌ನ್ನು ಸಿಂಗರಿಸಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಹಶೀಲ್ದಾರ ಸುರೇಶ ಮುಂಜೆ, ತಾ.ಪಂ.ಇಒ ಸುರೇಶ ಕದ್ದು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಶಿವನಗೌಡ ಪಾಟೀಲ, ಬಾಹುಸಾಹೇಬ ಪಾಟೀಲ, ಅರ್ಜುನ ಬಂಡಗರ, ಹಾಜಿ ಮುಲ್ಲಾ, ಫಾರೂಕ ಮೊಮಿನ, ಜ್ಯೋತಿ ಕೆಂಪಟ್ಟಿ, ದೀಲೀಪ ಜಮಾದಾರ, ತಮ್ಮಣ್ಣ ನಾಯಿಕವಾಡಿ, ಅಣ್ಣಪ್ಪ ಭೂವಿ, ಮಾರುತಿ ನಾಯಿಕ, ಬಸವರಾಜ ಮರ್ದಿ, ಕಿರಣ ಕಾಂಬಳೆ, ಶ್ರವಣ ಕಾಂಬಳೆ, ನಿರ್ಮಲಾ ಪಾಟೀಲ, ಶೈಲಜಾ ಕರಿಭೀಮಗೊಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 