ಬಟ್ಟೂರು"ಗ್ರಾಮದ ಫಕೀರ​‍್ಪ ವೀರ​‍್ಪ ಅಂಗಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಟ್ಟೂರು"ಗ್ರಾಮದ ಫಕೀರ​‍್ಪ ವೀರ​‍್ಪ ಅಂಗಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ  World Environment Day celebrated at Fakirpa Veerpa Angadi Government High School, Battur village

ಲಕ್ಷ್ಮೇಶ್ವರ" 05 :  ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಫಕೀರ​‍್ಪ ವೀರ​‍್ಪ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಸಸಿ ನೆಟ್ಟು ಮಾತನಾಡಿದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಲಮಾಣಿ ಅವರು ಪ್ರತಿ ವರ್ಷ ಜೂನ್ 6 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಲ್ಲರೂ ಪರಿಸರಕ್ಕೆ ಹೆಚ್ಚಿನ ವತ್ತು ಕೊಡಬೇಕು ಎಲ್ಲಿ ಉತ್ತಮ ಪರಿಸರ ಇರುತ್ತದೆಯೋ ಅಲ್ಲಿ ಉತ್ತಮ ಆರೋಗ್ಯ ಇರಲು ಸಾಧ್ಯ ಅದಕ್ಕಾಗಿಎಲ್ಲರೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯವಾಗಿದೆ ಎಂದರು.

ಪ್ರೌಢಶಾಲೆಯ ಪ್ರಧಾನ ಗುರುಗಳಾದ ಎಂ ಎಸ್ ಮಳಿಮಠ ಅವರು ಮಾತನಾಡಿ ಪ್ರತಿಯೊಬ್ಬ ಮನುಷ್ಯ ಪ್ರಾಣಿ ಪಕ್ಷಿಗಳು ಆರೋಗ್ಯವಾಗಿ ಇರಬೇಕಾದರೆ ಉತ್ತಮ ಪರಿಸರ ಅತಿ ಮುಖ್ಯ ಪ್ರತಿಯೊಬ್ಬರೂ ತಮ್ಮ ಮನೆಯ ಆವರಣದಲ್ಲಿ ಗಿಡ ನೆಡಲು ಜಾಗವನ್ನು ಬಿಟ್ಟುಕೊಂಡು ಗಿಡ ಹಚ್ಚುವುದರಿಂದ ಆ ಗಿಡದ ನೆರಳು ಗಾಳಿಯಿಂದ ಮನೆಯವರೆಲ್ಲರೂ ಆರೋಗ್ಯವಾಗಿ ಇರಲು ಸಾಧ್ಯ ಅದಕ್ಕಾಗಿ ಎಲ್ಲರೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಲ್ಲೆಂದರಲ್ಲಿ ಹಚ್ಚಿರುವ ಗಿಡ ಮರಗಳನ್ನು ಕಡೆದು ಪರಿಸರವನ್ನು ನಾಶ ಮಾಡಬಾರದು ಪರಿಸರ ಉತ್ತಮವಾಗಿದ್ದರೆ ಮಳೆ ಬೆಳೆಯೋ ಉತ್ತಮವಾಗಿ ಬರಲು ಸಾಧ್ಯ ಅದಕ್ಕಾಗಿ ಎಲ್ಲರೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವದು ಅವಶ್ಯವಾಗಿದೆ ಎಂದರು.

ಈ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಜಗದೀಶಗೌಡ್ರು ಪಾಟೀಲ ಶಾಲೆಯ ಶಿಕ್ಷಕರಾದ ಶಿಕ್ಷಕರಾದ ಎನ್ ಎನ್ ಸುಣಗಾರ ಎಸ್ ಎನ್ ಚಿಕ್ಕಣ್ಣವರ ಶ್ರೀನಿವಾಸ್ ಕಲಾಲ ರಾಕೇಶ್ ಚವಾಣ್ ಸುರೇಶ ಹಡಪದ ಯಲ್ಲಪ್ಪ ನಡುವಿನಕೆರಿ ಮಾಂತೇಶ್ ಮಾಡಳ್ಳಿ ಹಾಲೇಶ್ ಪಾಟೀಲ್ ಸೇರಿದಂತೆ ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಪಂಚಾಯಿತಿಯ ಸಿಬ್ಬಂದಿ ವರ್ಗದವರು ಇದ್ದರು