ಜೆ.ಎಸ್.ಎಸ್. ನಲ್ಲಿ “ಕದಂಬ ವನಮಹೋತ್ಸವ” ವಿಶ್ವಪರಿಸರ ದಿನ
World Environment Day at JSS “Kadamba Vanamahotsava”
ಲೋಕದರ್ಶನ ವರದಿ
ಧಾರವಾಡ 08: ಜೆ.ಎಸ್.ಎಸ್. ಸಂಸ್ಥೆಯ ಗೌರವಾನ್ವಿತ ಕಾರ‌್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕದಂಬ ವೃಕ್ಷದ ಸಸಿಗಳನ್ನು ಜೆ.ಎಸ್.ಎಸ್. ಕದಂಬ ಮೈದಾನದಲ್ಲಿ ನೆಡುವುದರ ಮೂಲಕ ‘ವಿಶ್ವ ಪರಿಸರ ದಿನ’ವನ್ನು ಆಚರಿಸಲಾಯಿತು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕಗಳು ಹಾಗೂ ಸಸ್ಯಶಾಸ್ತ್ರ ವಿಭಾಗದಿಂದ ಜಂಟಿಯಾಗಿ ಆಯೋಜಿತಗೊಂಡ ‘ವಿಶ್ವ ಪರಿಸರ’ ದಿನದ ಕಾರ‌್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು, ‘ಪರಿಸರದ ಮಹತ್ವ, ಕಲುಷಿತವಾಗುತ್ತಿರುವ ವಾಯು, ಜಲ, ಮಣ್ಣು, ಮಾಲಿನ್ಯಗಳ ಪರಿಸ್ಥಿತಿಯಿಂದ ಉಂಟಾಗುವ ದುಷ್ಟ-್ಪರಿಣಾಮಗಳ ಕುರಿತು ಮಾತನಾಡಿದರು. ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನು ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸಿ, ಸುಸ್ಥಿರ ಸುರಕ್ಷಿತ ಭವಿಷ್ಯಕ್ಕಾಗಿ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ ಅವರು ಮಾತನಾಡುತ್ತಾ, ಪರಿಸರದ ಆಹಾರ ಸರಪಳಿ, ಪರಿಸರ ವ್ಯವಸ್ಥೆ, ಜೈವಿಕ ಹಾಗೂ ಅಜೈವಿಕ ವಸ್ತುಗಳ ಅವಿನಾಭಾವ ಸಂಬಂಧವನ್ನು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ, ಜೆ.ಎಸ್.ಎಸ್. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. (ಶ್ರೀಮತಿ) ರತ್ನಾ ಐರಸಂಗ ಅವರು ಮಾತನಾಡುತ್ತ, ಪರಿಸರ ಮಾಲಿನ್ಯಕ್ಕೆ ಕಾರಣಗಳು, ದುಷ್ಟ-್ಪರಿಣಾಮಗಳು ಹಾಗೂ ಪರಿಸರ ಸಂರಕ್ಷಣೆಯ ಕ್ರಮಗಳನ್ನು ವಿವರಿಸಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸುಸ್ಥಿರತೆಗಾಗಿ ಹೋರಾಡಿದ ಮಹನೀಯರ ಜೀವನ ಹಾಗೂ ಕೊಡುಗೆಗಳ ಮೇಲೆ ಬೆಳಕು ಚೆಲ್ಲಿದರು.
ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವೆಂಕಟೇಶ ಮುತಾಲಿಕ ಅವರು, ಪರಿಸರ ಸುಸ್ಥಿರತೆ ಕಾಪಾಡುವಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಪರಿಸರ ಸಂಘಟನೆಗಳ ಸದಸ್ಯರು, ಸಾರ್ವಜನಿಕರು, ಗುರುತರ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಜೆ.ಎಸ್.ಎಸ್. ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ ಜೈನ, ಐ.ಟಿ.ಐ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾಧ್ಯೆ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತ ಅಲಿ ಮೆಗಲಮನಿ, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಆರ್. ಕುಂದಗೋಳ ಉಪಸ್ಥಿತರಿದ್ದರು.
ಪ್ರಾಧ್ಯಾಪಕರು, ಎನ್.ಸಿ.ಸಿ. ಕೆಡೆಟ್‌ಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬಹು ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಪರಿಸರ ಸಂರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವೆವೆಂದು ಪ್ರತಿಜ್ಞೆ ಸ್ವೀಕಾರ ಮಾಡಿದರು.
ಬೀರ್ಪ ಮತ್ತು ಬಸವರಾಜ ಪ್ರಾರ್ಥಿಸಿದರು. ಎನ್.ಸಿ.ಸಿ.ಯ ಲೆಫ್ಟಿನೆಂಟ್ ಡಾ. ಕವಿತಾ ಭಜಂತ್ರಿ ಸ್ವಾಗತಿಸಿದರು. ಎನ್.ಸಿ.ಸಿ.ಯ ಕೆರಟೇಕರ್ ಆಫೀಸರ್ ಆದ ಶ್ರೀ ಆನಂದ ಕಟ್ಟಿಮನಿ ವಂದಿಸಿದರು. ಸ್ಪೂರ್ತಿ ಹಾಗೂ ವೈಭವಿ ನಿರೂಪಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 