ವಿಶ್ವ ಪರಿಸರ ದಿನಾಚರಣೆ: ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಸಿ ವಿತರಣೆ

ವಿಶ್ವ ಪರಿಸರ ದಿನಾಚರಣೆ: ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಸಿ ವಿತರಣೆ World Environment Day: Sapling distribution to school children and teachers

ಶಿಗ್ಗಾವಿ  08: ಮಾನವ ಹಾಗೂ ಇತರೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲವು ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದ್ದು ಆ ಪರಿಸರವನ್ನ ನಾವು ಉಳಿಸಿ ಬೆಳೆಸುವ ಕಡೆಗೆ ಗಮನ ಹರಿಸಬೇಕು ಎಂದು ಶ್ರೀ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆಯ ಅದ್ಯಕ್ಷೆ ಭಾರತಿ ಛಬ್ಬಿ ಹೇಳಿದರು. ಪಟ್ಟಣದ ಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಸಿ ವಿತರಿಸಿ ಮಾತನಾಡಿದ ಅವರು, ಮಕ್ಕಳನ್ನ ಪೋಷಿಸುವಂತೆ ಸಸಿಗಳನ್ನು ನೆಟ್ಟು ಅವುಗಳನ್ನ ಮಕ್ಕಳಂತೆ ಪೋಷಿಸಿ ಮರಗಳನ್ನಾಗಿ ಬೆಳೆಸಿದ್ದೆ ಆದರೆ ನಮ್ಮ ನಾಡು ಸಮೃದ್ಧವಾಗಿರುತ್ತದೆ ಜೊತೆಗೆ ನಮ್ಮ ಜೀವ ಸಂಕುಲವನ್ನ ಉಳಿಸಿ ಬೆಳೆಸಲು ಕಾರಣವಾಗುತ್ತದೆ, ಹಾಗಾಗಿ ನಾವು ನಮ್ಮ ಮಕ್ಕಳಿಗೆ ಸಸಿಗಳನ್ನ ನೆಡಲು ಈಗಿನಿಂದಲೇ ಪ್ರೇರೇಪಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕೆ ಎಚ್ ಕುರುಬರ. ಹಾಗೂ ಸಹ ಶಿಕ್ಷಕಿಯರಾದ ಎಂ ಪಿ ಮೇಗಡಿ. ನಾಗರಾಜ್ ಛಬ್ಬಿ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.