ಜಿಲ್ಲೆಯ ಅಭಿವೃದ್ಧಿಗೆ ನಿಗದಿತ ಅವಧಿಯಲ್ಲಿ ಶ್ರಮಿಸಿ : ಡಾ. ಮೂರ್ತಿ ಎಲ್.
Work hard for the development of the district within the stipulated time: Dr. Murthy L.
ಲೋಕದರ್ಶನ ವರದಿ
ವಿಜಯಪುರ 29 : ಕಾನೂನಿನಡಿ ಬರುವ ಕೆಲಸವನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ ಎಲ್. ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಗರ ಹುಂಕುಂ ಅರ್ಜಿ ವಿಲೇವಾರಿ ಮಾಡಬೇಕು. ಗೋಮಾಳ ಜಮೀನು ಅರ್ಜಿ ಹಾಕಿಕೊಂಡಿದ್ದಾರೆ. ಆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು. ಸ್ಮಶಾನ ಭೂಮಿ ಎಲ್ಲೆಲ್ಲಿ ಅವಶ್ಯಕತೆ ಇದೆ ಎಂಬುದಾಗಿ ಜಾಗೆ ಗುರುತಿಸಬೇಕು.
ತಹಶೀಲ್ದಾರ್, ಎಸಿ ಮೂಲಕ ಡಿಸಿ ಗಮನಕ್ಕೆ ತಂದು ಲೋಪ ದೋಷಗಳಾಗದಂತೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಗೋಮಾಳ ಜಮೀನಿಗೆ ಸಂಬಂಧಿಸಿದ ಸರ್ಕಾರದ ಅಗತ್ಯತೆ ಅನುಸಾರ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಖಾಸಗಿ ಜಮೀನು ಮಂಜೂರು ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿರುವುದಿಲ್ಲ. ಅಂತಹ ಅರ್ಜಿಗಳ ಬಂದ ಸಂದರ್ಭದಲ್ಲಿ ಹಿಂಬರಹ ನೀಡಿ ತಕ್ಷಣ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಅರ್ಜಿ ಅರ್ಹತೆ ಇರುವ ಪ್ರಕರಣಗಳನ್ನು ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮನುಸಾರ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪಾಲಿಕೆಯಲ್ಲಿ ಒಟ್ಟು ಅನುದಾನದಲ್ಲಿ ಪಜಾ ಪಪಂ ವರ್ಗದವರಿಗೆ ಎಷ್ಟು ಅನುದಾನ ನಿಗದಿಪಡಿಸಿದ್ದಿರಿ. ಪೌರ ಕಾರ್ಮಿಕರಿಗೆ ಯಾವ ಲೆಕ್ಕ ಶೀರ್ಷಿಕೆಯಲ್ಲಿ ನೀಡುತ್ತೀರಿ. ಶೇ.25 ರಷ್ಟು ಅನುದಾನ ಮೀಸಲಿಡಬೇಕು. ಫಲಾನುಭವಿಗಳ ಆಯ್ಕೆಯನ್ನು ಹೇಗೆ ಮಾಡುತ್ತೀರಿ. ಪಜಾ, ಪಪಂ ಎಷ್ಟು ಜನ ಗುತ್ತಿಗೆದಾರರಿದ್ದಾರೆ. ಎಷ್ಟು ಜನ ಗುತ್ತಿಗೆದಾರರಿದ್ದಾರೆ. ಆ ಮಾಹಿತಿಯನ್ನು ಆಯೋಗಕ್ಕೆ ತಕ್ಷಣ ನೀಡಬೇಕು ಎಂದು ಹೇಳಿದರು. ಪೌರ ಕಾರ್ಮಿಕರಿಗೆ ವೇತನ ಯಾವುದರ ಮೂಲಕ ಅನುದಾನ ನೀಡುತ್ತೀರಿ.
ಪೌರ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಯಾರೂ ಇರುವುದಿಲ್ಲ. ಏಜೆನ್ಸಿ ಮೂಲಕ ನೀಡುವ ಹೊರಗುತ್ತಿಗೆ ಸಿಬ್ಬಂದಿ ಸಮರ್ಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇನ್ನೊಂದೆಡೆ ಕೆಲ ಪ್ರಕರಣಗಳಲ್ಲಿ ಲೋಪ ಎಸಗುವ ಎನ್ ಜಿಓಗಳನ್ನು ಕಪ್ಪು ಪಟ್ಟಿಗೆ ಸೇರೆ್ಡ ಮಾಡಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಪೌರ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿ. ವಿವಿಧ ಸಿದ್ಧತಾ ಪೂರ್ವ ತಯಾರಿ ನಡೆಸುವ ಪೌರ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹಿಸಿ. ನಿಗದಿತ ಅನುದಾನ ಅದೇ ಕಾರಣಕ್ಕೆ ವಿನಿಯೋಗಿಸಬೇಕು ಎಂದರು. ಎಸ್‌ಸಿಪಿಟಿ ಎಸ್ಪಿ ಅನುದಾನ ಬಳಕೆ ನಾಮಫಲಕ ಅಳವಡಿಸಬೇಕು.
ಸ್ಥಳೀಯ ಸಂಸ್ಥೆಗಳಲ್ಲೂ ಎಸ್‌ಸಿಪಿಟಿ ಎಸ್ಪಿ ಅನುದಾನ ಅಪವ್ಯಯವಾಗದಂತೆ ಅನುದಾನ ವಿನಿಯೋಗಿಸಿ ಈ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಪಜಾ, ಪಪಂ ಉದ್ದಿಮೆದಾರರಿಗೆ ಪಿಡಿಒ, ಇಒ ನಗರಸಭೆ ಕೆಲಸ ಕಾಮಗಾರಿ ನೀಡುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ಕೃಷಿ ಇಲಾಖೆಯಿಂದ ಕೇಂದ್ರ ಮತ್ತು ರಾಜ್ಯ ವಲಯದ ಅನುದಾನ ಸದ್ಭಳಕೆ ಮಾಡಿಕೊಂಡು ಈ ಜನಾಂಗದ ರೈತರಿಗೆ ಕೃಷಿ ಪರಿಕರ ಒದಗಿಸಿ ಕೊಡಬೇಕು ಎಂದು ಮೂರ್ತಿ ಸಲಹೆ ಮಾಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 