ಮಹಿಳೆ ಸಮಾಜದ ಸಮಗ್ರ ಮತ್ತು ಪ್ರಗತಿಪರ ಬೆಳವಣಿಗೆಯ ಭಾಗ
Women are part of the comprehensive and progressive development of society
ಆಲಮೇಲ 16: ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಸಿಗಬೇಕು ಎಂದು ಎಸ್ ಎನ್ ಹಪ್ತಿ ಹೇಳಿದರು.
ಅವರು ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ರಾಜಕೀಯ ಸಾಮಾಜಿಕ ಆರ್ಥಿಕ ಸಬಲತೆ ಹೊಂದಿದಾಗ ಕುಟುಂಬದ ಅಭಿವೃದ್ಧಿಗೆ ಅಲ್ಲದೆ ದೇಶದ ಬೆಳವಣಿಗೆಗೂ ಕಾರಣವಾಗುತ್ತಾಳೆ ಎಂದು ಹೇಳಿದರು.
ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಪಾಟೀಲ್ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ವೀರಭದ್ರ ಗೋಲಾ ಮಾತನಾಡಿ ಮಹಿಳೆ ಒಂದು ದೇಶದ ಪ್ರಗತಿಯ ಸಂಕೇತ ಅವಳಿಗೆ ಉತ್ತಮವಾದ ಶಿಕ್ಷಣ ನೀಡಿ, ಎಲ್ಲರಂತೆ ಅವಕಾಶಗಳನ್ನು ಸಮಾನವಾಗಿ ಪಡೆಯಲು ಸಮರ್ಥಲಾಗಿದ್ದಾಳೆ ಎಂದರು. ಸಬಲೀಕರಣದ ಅಧಿಕಾರಿ ವ್ಹಿ ಎಸ್ ಶಹಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಥಿತಿಗಳಾಗಿ ಪ್ರೊ ಆರ್ ವೈ ಕಂಬಾರ, ಪ್ರೊ ಎಸ್ ಎಂ ಹರನಾಳ, ಡಾ. ಐ ಜಿ ಕೋನಸಿರಸಗಿ, ವಿದ್ಯಾರ್ಥಿನಿ ಉಮಾಶ್ರೀ ಬಿಜಾಪುರ ಮಾತನಾಡಿದರು. ಗೌರಿ ಶಾಬಾದಿ ಪ್ರಾರ್ಥಿಸಿದರು, ನಾಜಿಯಾ ಮುಲ್ಲಾ ನಿರೂಪಿಸಿದರು. ಶರಣಮ್ಮ ಚೌಡಾಪುರ ಸ್ವಾಗತಿಸಿದರು. ಪದ್ಮಾವತಿ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 