ಕೆಎಸ್‌ಆರ್ ಟಿಸಿ ಬಸ್ ಹರಿದು ಮಹಿಳೆ ಗಂಭೀರ ಗಾಯ
Woman critically injured after being run over by KSRTC bus
ಲೋಕದರ್ಶನ ವರದಿ
ಇಂಡಿ 08: ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಕೆಎಸ್ಆರಿ್ಟಸಿ ಬಸ್ ಹರಿದು ಮಹಿಳೆಯೋರ್ವಳು ಗಂಭೀರವಾಗಿ ಗಾಯಗೊಂಡಿದ್ದು ಮಹಿಳೆಯನ್ನು ಇಂಡಿ ನಗರದ ಮದ್ದುನ ತಾಂಡಾ ನಿವಾಸಿ ಅನುಷಾ ಸಂತೋಷ್ ಚೌಹಾಣ್ (45) ಎಂದು ಗುರುತಿಸಲಾಗಿದೆ.
ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಸವೇಶ್ವ ಸರ್ಕಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯನ್ನು ಸಾರ್ವಜನಿಕರು ಕೂಡಲೆ ಟಂ.ಟಂ ವಾಹನದಲ್ಲಿ ಮಹಿಳೆಯನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಯಶೋದಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಯಶೋದಾ ಆಸ್ಪತ್ರೆಯಲ್ಲಿ ಅನುಷಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದು ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ಬಸವೇಶ್ವರ ಸರ್ಕಲ್ ಬಳಿ ಅನುಷಾ ಅವರು ರಸ್ತೆ ದಾಟುತ್ತಿದ್ದ ವೇಳೆ ಬಂದ ಬಸ್ ಇವರ ಮೇಲೆ ಹರಿದಿತ್ತು. ಅಪಘಾತದಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಸದ್ಯ ಇಂಡಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಇಂಡಿ ನಗರದಲ್ಲಿ ಪಾದಚಾರಿಗಳಿಗೆ ಅಡ್ಡಾಡಲು ಫುಟ್‌ಪಾತ್ ನಿರ್ಮಿಸಿದ್ದರೂ ಆ ಫುಟ್‌ಪಾತ್ ಮೇಲೆ ನಡೆದು ಹೋಗಲು ಸ್ಥಳವೇ ಇಲ್ಲ. ವ್ಯಾಪಾರಸ್ಥರು ಫುಟ್‌ಪಾತ್ ಸಂಪೂರ್ಣ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿಯೇ ಇಂತಹ ಘಟನೆ ನಡೆಯುತ್ತಿವೆ. ಅಲ್ಲದೆ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಚೌಕಿ ಇದೆ. ಆದರೆ ಅಲ್ಲಿ ಯಾರೂ ಪೊಲೀಸರು ಇರದೇ ಇರುವುದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತ ನಡೆಯುತ್ತಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 