ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ17 : ತಮ್ಮ ಅತ್ಯ ಅಮೂಲ್ಯವಾದ ಒಂದೊಂದು ಕ್ಷಣವನ್ನು ಅನುಭವಿಸಬೇಕು. ನೀವು ಬರಿ ಮಾತನಾಡದೆ ಸಾಧಕರಾಗಬೇಕು. ನೀವು ಮಾಡಿದ ಸಾದನೆಯನ್ನು ನೋಡಿ ಇಡಿ ಪ್ರಪಂಚದ ಜನ ಮಾತನಾಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಂಕಾಫುರ ಪಟ್ಟಣದ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ 2018/19 ನೇ ಸಾಲಿನ ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಹಾಗು ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬವ್ಯಕ್ತಿಗೂ ಚಿಂತನೆ ಇರಬೇಕು. ಆ ಚಿಂತನೆಯೊಳಗೆ ಗುರಿ ಇರಬೇಕು. ಆ ಗುರಿ ತಲುಪಲು ದಣಿವರಿಯದ ಪರಿಶ್ರಮವಿದ್ದಾಗ ಅಂತಹ ವ್ಯಕ್ತಿ ಸಾಧಕನಾಗಿ ಮೇರೆಯಬಲ್ಲ ವಿದ್ಯಾಥರ್ಿಗಳು ಸೋಲಿಗೆ ಹೆದರದೇ ಮುನ್ನಡೆದಾಗ ಗೆಲವು ನಿಮ್ಮನ್ನರಸಿ ಬರಲಿದೆ ಎಂದು ಹೇಳೀದರು.
ಮುಖ್ಯ ಅತಿಥಿಸ್ಥಾನವನ್ನು ಅಲಂಕರಿಸಿ ನಿವೃತ್ತ ಪ್ರಾಂಶುಪಾಲ ಪ್ರೋ.ಪಂಚಾಕ್ಷರಯ್ಯ ಮಾತನಾಡಿ ಸಾರ್ವತ್ರಿಕ ಬದುಕಿನ ಸಾಕ್ಷಾತ್ಕಾರಕ್ಕೆ ಜ್ಞಾನ ಸಂಸ್ಕಾರ ಅತ್ಯ ಅವಶ್ಯವಾಗಿದೆ.
ಮನುಷ್ಯ ಭೂಮಿಯ ಮೇಲಿನ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ನೀರು, ಬೆಳಕು, ಗಾಳಿ, ಪರಿಸರದಂತಹ ನೈಜ ದೈವತ್ವವನ್ನು ಉಳಿಸಿಕೊಂಡು ಹೋಗಬೇಕು. ಪ್ರತಿಯೊಬ್ಬ ಜೀವಿ ಬೌತಿಕ ಅಂಶವನ್ನು ಅರ್ಥಮಾಡಿಕೊಂಡು ಪಾರಮಾಥರ್ಿಕ ಸಾದನೆಮಾಡಿದಲ್ಲಿ ಅಂತರಂಗ, ಬಹಿರಂಗ ಶುದ್ಧಿಯಾಗಿ ಬದುಕಿನ ಸಾರ್ಥಕತೆಗೆ ಸಾದ್ಯವಾಗುತ್ತದೆ. ನಾವು ಭೂಮಿಯ ಮೇಲಿರುವ ನೈಸಗರ್ಿಕ ಸಂಪತ್ತನ್ನು ಅನಿಭವಿಸುತ್ತಿದ್ದೆವೆ ಅವುಗಳನ್ನು ಮುಂದಿನ ಪಿಳಿಗೆಗೆ ನೀಡುವ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ ಆ ನಿಟ್ಟಿನಲ್ಲಿ ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಮುಖಂಡರಾದ ತಾಲೂಕಾ ಬಿಜೆಪಿ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಅಶೋಕ ಪಟ್ಟಣಶೆಟ್ಟರ, ಬಸವರಾಜ ನಾರಾಯಣಪುರ, ಗುಡ್ಡಪ್ಪ ಮತ್ತೂರ, ಲಿಂಗರಾಜ ಹಳವಳ್ಳಿ, ಪ್ರೋ. ಕೆ.ಪಿ.ಬೆಣಗೇರಿ, ಉಮೇಶ ಕರ್ಜಗಿ, ವಿಜಯ್ ಗುಡಗೇರಿ, ವಿಜಯಲಕ್ಷ್ಮೀ, ನಿಂಗಪ್ಪ ಕಲಕೋಟಿ, ಮಂಜುನಾಥ ನಾಯಕ, ಮೇಘರಾಜ ಚನ್ನಾಪುರ, ರಘುಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಿ.ಎಸ್.ಸೊಗಲದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುಧಾ ಹಿರೇಮಠ ಸ್ವಾಗತಿಸಿದರು. ಪ್ರೋ. ಸುಜಾತಾ ಕಡ್ಲಿ ನಿರೂಪಿಸಿದರು. ಆನಂದ ಇಂದೂರ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 