ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ನಡೆಯುತ್ತಿರುವ ಚಳುವಳಿಗೆ ನಮ್ಮೆಲ್ಲರ ಬೆಂಬಲ
We all support the ongoing movement for a separate Dharwad Municipal Corporation
ಲೋಕದರ್ಶನ ವರದಿ
ಧಾರವಾಡ 25 : ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಲಿಡಕರ ಹಿತ ಅಭಿವೃದ್ಧಿ ಸಂಘ( ರಿ) ಧಾರವಾಡ. ಸಮಸ್ತ ಸಮಗಾರ ಬಾಂಧವರ ವತಿಯಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ನಡೆಯುತ್ತಿರುವ ಚಳುವಳಿಗೆ ನಮ್ಮೆಲ್ಲರ ಬೆಂಬಲ ನೀಡುತ್ತಾ ಸನ್ಮಾನ್ಯರೇ ದಿನಾಂಕ: 25.05.2026 ರಂದು ಸೋಮವಾರ ಬೆಳಿಗ್ಗೆ 10:30ಕ್ಕೆ ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಲಿಡ್ಕರ್ ಹಿತ ಅಭಿವೃದ್ಧಿ ಸಂಘ ವತಿಯಿಂದ ಧಾರವಾಡದ ಕಲಾಭವನದ ಹತ್ತಿರ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗೌರವಪೂರ್ವಕ ಮಾಲಾರೆ್ಣ ಮಾಡುತ್ತಾ ಸಮಸ್ತ ಸಮಗಾರ ಬಾಂಧವರು ಉಪಸ್ಥಿತಿಯಲ್ಲಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಹು ವರ್ಷಗಳಿಂದ ಧಾರವಾಡ ನಗರ ಅಭಿವೃದ್ಧಿ ಪಥದಲ್ಲಿ ತುಂಬಾ ಹಿಂದಿಟು ಹೊಂದಿದ್ದ ಧಾರವಾಡ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಹಿಂದೆ ಸಾಕಷ್ಟು ಅನುದಾನ ಬಂದರೂ ಧಾರವಾಡದ ಅಭಿವೃದ್ಧಿ ಮಾತ್ರ ಶೂನ್ಯ ಈ ಬಗ್ಗೆ ಪ್ರಮುಖ ಹಲವಾರು ಕಾರಣಗಳಿಂದ ಸ್ಥಳೀಯ ನಾಗರಿಕರು ತುಂಬಾ ಬೇಸತ್ತು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೊಂದಬೇಕೆಂದು ಧಾರವಾಡದ ನಾಗರಿಕರು ದೃಢ ನಿರ್ಧಾರ ಹೊಂದಿರುತ್ತಾರೆ. ಸದರಿ ವಿಷಯ ಕುರಿತು ಸ್ಥಳೀಯ ನಾಗರಿಕರಿಂದ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಸಾಕಷ್ಟು ಪತ್ರಗಳನ್ನು ಬರೆದು ಮನವರಿಕೆ ಮಾಡಿದ್ದು ಮತ್ತು ಈಗಾಗಲೇ ಸದರಿ ವಿಷಯ ಕುರಿತು ಹಲವಾರು ಬಾರಿ ಪ್ರತಿಭಟನೆ ಮಾಡಿದ್ದು ಎಲ್ಲ ವಿಷಯಗಳನ್ನು ಮನಗೊಂಡು ಮಾನ್ಯ ಮುಖ್ಯಮಂತ್ರಿಗಳಾದ
ಶ್ರೀ ಸಿದ್ದರಾಮಯ್ಯ ಕರ್ನಾಟಕ ಸರ್ಕಾರ ಬೆಂಗಳೂರು ಅವರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಅನುಮೋದನೆಗೊಂಡಿದ್ದರೂ ಇವರಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೊಂದಿರುವುದಿಲ್ಲ. ಪ್ರತ್ಯಕ್ಕ ಮಹಾನಗರ ಪಾಲಿಕೆ ರಾಜಕೀಯವರೂ ರಾಜಕೀಯ ಆಗಿ ಬಳಸದೆ ನಾಗರಿಕರ ಹಿತ ಕಾಪಾಡಲು ನಗರ ಅಭಿವೃದ್ಧಿ ಹೊಂದಬೇಕೆಂದು ಸ್ಥಳೀಯ ನಾಗರಿಕರ ಉದ್ದೇಶ ಹಾಗೂ ಸಂಕಲ್ಪವಿದ್ದು ಮಾನ್ಯ ಮುಖ್ಯಮಂತ್ರಿಗಳ ಆದೇಶವನ್ನು ಉಲ್ಲಂಘನೆ ಮಾಡದೆ ಕೂಡಲೇ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೊಂದಲು ಮಾನ್ಯರು ಕೂಡಲೇ ಆದೇಶಿಸಬೇಕೆಂದು ತಮ್ಮಲ್ಲಿ ಈ ಮೂಲಕ ಕೋರಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಅಶೋಕ್ ಭಂಡಾರಿ. ಡಾಕ್ಟರ ಮಾರುತಿ ಹೆಬ್ಬಳ್ಳಿ. ಪರಶುರಾಮ್ ಮಿಶ್ರಿಕೋಟೆ. ಸೋಮೇಶ್ವರ ಬೆಂಡಿಗೇರಿ. ಮಂಜುನಾಥ್ ಯ. ಗಾಮನಗಟ್ಟಿ. ಸುರೇಂದ್ರ ಬೆಂಡಿಗೇರಿ. ರಮೇಶ್ ದೇವಮಾನೆ. ಗುರುನಾಥ್ ಮುರಗೋಡ.ಎಲ್ಲಪ್ಪ ಮುರಗೋಡ. ರಾಮಚಂದ್ರ ಸವದತ್ತಿ. ಲಕ್ಷ್ಮಣ್ ಮಿಶ್ರಿಕೋಟಿ. ರಾಜೇಂದ್ರ ಕದಮ. ಸಂಜುಸಾಮ್ರಾಣಿ. ಸಂದೀಪ್ ಮಿಶ್ರಿಕೋಟೆ. ಸದಾನಂದ ನಿಪ್ಪಾಣಿಕರ್. ರಮೇಶ್ ಎಸ್ ದೊಡ್ಡವಾಡ. ನಾಗೇಂದ್ರ ಖಾನ್ ಪೇಟ್. ರಾಜೇಂದ್ರ ಗಾಮನಗಟ್ಟಿ. ಮಂಜುನಾಥ್ ಮಿಶ್ರಿಕೋಟಿ. . ರಮೇಶ್ ಆರ್ ದೊಡವಾಡ. ಪರಶುರಾಮ್ ಕಿತ್ತೂರ್. ರಜನಿಕಾಂತ್ ಹೊಂಗಲ. ರಾಜೇಂದ್ರ ಗಾಮನಗಟ್ಟಿ. ಹನುಮಂತ ಗಾಮನಗಟ್ಟಿ. ಬಸವರಾಜ್ ಕುಂದರಗಿ. ಕುಮಾರ್ ವಕ್ಕುಂದ.ರಾಮಚಂದ್ರ ಮುರಗೋಡ. ಪ್ರಕಾಶ್ ವಕ್ಕುಂದ. ಪುಂಡಲಿಕ್ ಸವದತ್ತಿ. ಗಣೇಶ್ ಹೊಂಗಲ್. ಸಂಜು ಅ.ಹೊಂಗಲ. ಹನುಮಂತ ಗಾಮನಗಟ್ಟಿ. ಮಹೇಶ್ ಬೆಳಗಾವ್. ವಿನೋತ ದೊಡ್ಡಮನಿ. ಪ್ರಶಾಂತ್ ನಿ. ದೊಡ್ಡವಾಡ. ರಾಜು ಬಿ ಹೊಂಗಲ್. ಗೋಪಾಲ್ ಶಿರಹಟ್ಟಿ. ಡೋಹರ ಸಮಾಜದ ಮುಖಂಡರಾದ ಯಲ್ಲಪ್ಪ ಎನ್.ಸವಣೂರ. ಹಾಗೂ ಮುಂತಾದವರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 