ಮಳೆ ಕೊರತೆಯಿಂದ ಸೂಪಾ ಜಲಾಶಯದ ನೀರಿನ ಮಟ್ಟ ಕುಸಿತ
Water level in Supa Reservoir drops due to rainfall deficit
ಕಾರವಾರ ಜುಲೈ 9: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸೂಪಾ ಜಲಾಶಯದಲ್ಲಿ ಈ ವರ್ಷ ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಪರಿಣಾಮ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿತ್ತು. ಆದರೆ ಜುಲೈ 6ರಿಂದ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ನೀರಿನ ಮಟ್ಟದಲ್ಲಿ ಏರಿಕೆ ಕಾಣಲಾಗಿದೆ.
2025ರ ಜುಲೈ 3ರಂದು ಸೂಪಾ ಜಲಾಶಯದ ನೀರಿನ ಮಟ್ಟ 539.12 ಮೀಟರ್ ಇದ್ದರೆ, 2026ರ ಜುಲೈ 3ರಂದು ಅದು 525.20 ಮೀಟರ್ಗೆ ಇಳಿದಿತ್ತು. ನಂತರ ಜುಲೈ 6ರಿಂದ ಆರಂಭವಾದ ಮಳೆಯ ಪರಿಣಾಮ ಕೇವಲ ಎರಡು ದಿನಗಳಲ್ಲಿ ಸುಮಾರು ಎರಡು ಮೀಟರ್ಗೂ ಹೆಚ್ಚು ನೀರಿನ ಮಟ್ಟ ಏರಿಕೆಯಾಗಿ, ಜುಲೈ 9ರಂದು 528.87 ಮೀಟರ್ಗೆ ತಲುಪಿದೆ.
ಜೂನ್ ತಿಂಗಳಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಜಲಾಶಯದಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯದ ಕೇವಲ ಶೇ.12ರಷ್ಟು ಮಾತ್ರ ನೀರು ಉಳಿದಿತ್ತು. ಇದರಿಂದ 2027ರ ಜನವರಿಯಿಂದ ಮೇ ತಿಂಗಳವರೆಗೆ ಜಲವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿತ್ತು. ಈಗ ಮಳೆಯೊಂದಿಗೆ ಸಂಗ್ರಹ ನಿಧಾನವಾಗಿ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಸೂಪಾ ವಿದ್ಯುತ್ ಸ್ಥಾವರದಲ್ಲಿ ತಲಾ 40 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳಿದ್ದರೂ, ನೀರಿನ ಕೊರತೆಯಿಂದ ಅಗತ್ಯವಿದ್ದಾಗ ಮಾತ್ರ ವಿದ್ಯುತ್ ಉತ್ಪಾದನೆ ನಡೆಸಲಾಗುತ್ತಿತ್ತು. ಸೂಪಾದಿಂದ ಹೊರಬಿಡುವ ನೀರನ್ನು ಬೊಮ್ಮನಹಳ್ಳಿ, ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳಿಗೆ ಹರಿಸಿ ಅಲ್ಲಿನ ಜಲವಿದ್ಯುತ್ ಯೋಜನೆಗಳಲ್ಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ವರ್ಷ ಮಳೆ ಕೊರತೆಯಿದ್ದರೂ, ಬೊಮ್ಮನಹಳ್ಳಿ, ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ನೀರಿನ ಮಟ್ಟ ಕಳೆದ ವರ್ಷದಷ್ಟೇ ಇರುವುದರಿಂದ ಸದ್ಯಕ್ಕೆ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಉಂಟಾಗಿಲ್ಲ.
ಜಲಾಶಯಗಳ ಸ್ಥಿತಿ; ಕದ್ರಾ ಜಲಾಶಯದಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ನೀರಿನ ಮಟ್ಟ 30 ಮೀಟರ್ ಇದ್ದರೆ, 2026ರ ಜುಲೈ 8ರಂದು ಅದು 30.02 ಮೀಟರ್ ದಾಖಲಾಗಿದೆ. ಕೊಡಸಳ್ಳಿ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 68 ಮೀಟರ್ ನೀರಿನ ಮಟ್ಟ ಇದ್ದರೆ, ಈ ವರ್ಷ ಜುಲೈ 8ರಂದು 70.54 ಮೀಟರ್ಗೆ ಏರಿಕೆಯಾಗಿದೆ.
ಒಳಹರಿವು ಹೆಚ್ಚಳ : ಜೊಯಿಡಾ ಹಾಗೂ ಸೂಪಾ ಜಲಾನಯನ ಪ್ರದೇಶದಲ್ಲಿ ಜೂನ್ ತಿಂಗಳೀಡೀ ಮಳೆ ಕೊರತೆ ಎದುರಾಗಿತ್ತು. ಜುಲೈ 5ರಂದು ಸೂಪಾ ಜಲಾಶಯಕ್ಕೆ ಕೇವಲ 1,824.91 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಹೊರಹರಿವು 2,427 ಕ್ಯೂಸೆಕ್ ಇತ್ತು. ಸಾಮಾನ್ಯವಾಗಿ ಮಳೆಗಾಲದಲ್ಲಿ 25 ಸಾವಿರದಿಂದ 50 ಸಾವಿರ ಕ್ಯೂಸೆಕ್ವರೆಗೆ ಒಳಹರಿವು ದಾಖಲಾಗುತ್ತದೆ.
ಆದರೆ ಜುಲೈ 8ರಂದು ಜಲಾಶಯಕ್ಕೆ 23,880.54 ಕ್ಯೂಸೆಕ್ ಒಳಹರಿವು ದಾಖಲಾಗಿರುವುದು ಪರಿಸ್ಥಿತಿ ಸುಧಾರಿಸುತ್ತಿರುವುದಕ್ಕೆ ಸೂಚಕವಾಗಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಾಣುವ ನೀರೀಕ್ಷೆಯಿದೆ.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 