ಬ್ಯಾಡ್ಗಿ

ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ

ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ


 ಬ್ಯಾಡಗಿ  26: ಕೆರೆಗಳು  ಕೇವಲ ಮೂಲಗಳಲ್ಲ ಅವು ಕೃಷಿ ಕುಡಿಯುವ ನೀರು ಅಂತರ್ಜಲ ಮಟ್ಟ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕೆರೆಯ ಅಭಿವೃದ್ಧಿಯಿಂದ ನಮ್ಮ ರೈತರಿಗೆ ಮತ್ತು ಗ್ರಾಮಸ್ಥರಿಗೆ  ಅನುಕೂಲ ಆಗಲಿದೆ. ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ  ಶೀಡೆನೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದೊಡ್ಡ ತಳವಾರಕೆರೆ ಹಸ್ತಾಂತರ ಹಾಗೂ ನಾಮಫಲಕ ವನ್ನು ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜ ಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಯೋಜನೆ ನೀಡುತ್ತಿರುವ ಕೊಡುಗೆ ನಿಜಕ್ಕೂ ಶ್ಲಾಘನೀಯ.

ಅಭಿವೃದ್ಧಿಪಡಿಸಿರುವ ಈಕೆರೆಯನ್ನು ಮುಂದಿನ ದಿನಗಳಲ್ಲಿ ಉತ್ತಮವಾಗಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ಪರಮಪೂಜೆ ಶ್ರೀ ಮು.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿ  ಮಠ ಹಾವೇರಿ ಇವರು ಕೆರೆಗೆ ಬಾಗಿನ ಅರ​‍್ಿಸಿ ಮಾತನಾಡಿ ಗ್ರಾಮದ ಕೆರೆ ಅಭಿವೃದ್ಧಿ ಪಡಿಸಿ ಹಸ್ತಾಂತರಿಸುವದು ಸೊಂಟದ ಸಂಗತಿಯಾಗಿದೆ ಕೆರೆ ಎಂದರೆ ಕೇವಲ ನೀರು ಸಂಗ್ರಹಿಸುವ ಸ್ಥಳವಲ್ಲ ಅದು ಗ್ರಾಮದ ಜೀವನಾಡಿ ಕೆರೆಗಳಲ್ಲಿ ನೀರು ಸಂಗ್ರವಾದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ.

ಕೃಷಿಗೆ ಅನುಕೂಲವಾಗುತ್ತದೆ ಹಾಗೂ ಪರಿಸರ ಸಮತೋಲನ ಕಾಪಾಡಲು ಸಹಾಯವಾಗುತ್ತದೆ ನಮ್ಮ ಪೂರ್ವಜರು ಕೆರೆಕಟ್ಟೆ ಬಾವಿ ಮತ್ತು ಕಾಲುವೆಗಳನ್ನು ನಿರ್ಮಿಸಿ ಮುಂದಿನ ಪೀಳಿಗೆಗೆ ಅಮೂಲ್ಯವಾದ ಸಂಪತ್ತು ನೀಡಿದ್ದಾರೆ ಅದೇ ರೀತಿಯಲ್ಲಿ ನಾವು ಸಹ ಪ್ರಕೃತಿ ಮತ್ತು ಜಲ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.  

ಮಾಜಿ ಶಾಸಕ ನೆಹರು ಓಲೆಕಾರ್ ಮಾತನಾಡಿ ಇದೇ ನಮ್ಮ ಗ್ರಾಮದ ಆಸ್ತಿ, ಇದನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಜಲಸಂಪನ್ಮೂಲವನ್ನು ನೀಡೋಣ ಕೆರೆಯಲ್ಲಿ ಕಸ ಹಾಕದಂತೆ ಅಕ್ರಮ ಒತ್ತುವರಿ ನಡೆಯದಂತೆ ಹಾಗೂ ನೀರಿನ ಮೂಲಗಳನ್ನು ಸತ್ಯವಾಗಿ ಕಾಪಾಡುವ ಕೆಲವು ಸರ್ ಪ್ರತಿಯೊಬ್ಬ ಗ್ರಾಮಸ್ಥರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಮೇಡಂ .ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.

ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆಎಂ. ರೈತ ಹೋರಾಟಗಾರ ಕಿರಣ್ ಕುಮಾರ್ ಗಡಿಗೊಳ್‌. ವೀರನಗೌಡ ತೆವರಿ. ರೈತ ಮುಖಂಡರಾದ ಗಂಗಣ್ಣ ಎಲಿ. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ. ಕೆಎಂಎಫ್ ನಿರ್ದೇಶಕರಾದ ಪ್ರಕಾಶ್ ಬನ್ನಿಹಟ್ಟಿ. ಶೇಖರ್ ಗೌಡ್ರು. ಪರಮೇಶ್ ಗೌಡ ತೆವರಿ. ಯೋಜನಾಧಿಕಾರಿ ಮಹಾದೇವ ನಾಯಕ್ . ಅಶೋಕ್ ಬಿ. ಶ್ರೀನಿವಾಸ್‌. ಪ್ರಕಾಶ್ ಜಿ. ನೇತ್ರಾವತಿ ಗೌಡ. ಹಾಗೂ ಸ್ವಸಹಾಯ ಪ್ರಗತಿ ಬಂದು ಸಂಘದ ಸದಸ್ಯರು ಕೆರೆ ಸಮಿತಿಯ ಸರ್ವ ಸದಸ್ಯರು ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು. 


ಸುದ್ದಿ ಓದಿ