ಉಭಯ ತಾಲೂಕುಗಳ ವಿಕಲಚೇತನರಿಂದ ಮತದಾನ ಜಾಗೃತಿ

ಶಿರಹಟ್ಟಿ 23: ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಉಭಯ ತಾಲೂಕಿನ ವಿಕಲಚೇತನರೆಲ್ಲ ಸೇರಿ ತ್ರಿಚಕ್ರ ವಾಹನಗಳ ಮೂಲಕ ಸರ್ವರಲ್ಲೂ ಮತದಾರ ಜಾಗೃತಿ ಮೂಡಿಸಲು ಶನಿವಾರ ಮಧ್ಯಾಹ್ನ 12 ಗಂಟೆಗೆ ಮುಂದಾದರು. 

ಉಭಯ ತಾಲೂಕಿನ ವಿವಿಧೋದ್ದೇಶಗಳ ಕಾರ್ಯಕರ್ತೆ ಭಾರತಿ ಮೂರಶಿಳ್ಳಿ ಮಾತನಾಡಿ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ, ತಾಲೂಕಾಡಳಿತ ಶಿರಹಟ್ಟಿ, ತಾಲೂಕಾ ಪಂಚಾಯತ ಶಿರಹಟ್ಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಮ್ಮ ರಾಜ್ಯದ ವಿಕಲಚೇತನರ ಸವಾಂರ್ಗೀಣ ಅಭಿವೃದ್ಧಿಗೋಸ್ಕರ ಮತದಾನ ಮಾಡುವುದು ಅತ್ಯಗತ್ಯವಾಗಿದೆ, ಮತದಾನ ನಮ್ಮೆಲ್ಲರ ಹಕ್ಕಾಗಿದೆ, ನಾವು ಕೂಡ ಮತ ಚಲಾಯಿಸೋಣ, ನಮಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಪಡೆಯೋಣ, ಆದಕಾರಣ ವಿಕಲಚೇತನರಿಗೂ ಕೂಡ ಮತದಾನ ಮಾಡುವ ಹಕ್ಕಿದೆ, ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸೋಣ, ಜೊತೆಗೆ ಸಮಾಜದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಎಂದು ಪಟ್ಟಣದ ತಾಲೂಕಾ ಪಂಚಾಯತ ಕಚೇರಿಯಿಂದ ತಹಶೀಲ್ದಾರರ ಕಚೇರಿವರೆಗೆ ಬೈಕ್ ರಾ​‍್ಯಲಿ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದ್ದೇವೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಉಭಯ ತಾಲೂಕುಗಳ ಎಲ್ಲ ಗ್ರಾಮಗಳ ಪುನರ್ವಸತಿ ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ಕಾರ್ಯಕರ್ತರು ಪುರಸಭೆ ಕಾರ್ಯಕರ್ತರು ಉಪಸ್ಥಿತರಿದ್ದು ಸರ್ವರಲ್ಲಿ ಮತದಾನದ ಜಾಗೃತಿ ಮೂಡಿಸಿದರು.