ವಿಶ್ವಾಸ ಟ್ರೋಪಿ-2026ಗೆ ಅದ್ಧೂರಿ ಚಾಲನೆ: ಅಶ್ವತ್ ವೈದ್ಯರಿಂದ ಉದ್ಘಾಟನೆ
Vishwas Trophy-2026 gets off to a grand start: Inauguration by Ashwath Vaidya
ಯರಗಟ್ಟಿ 15: ವಿಶ್ವಾಸಣ್ಣಾ ಅಭಿಮಾನಿ ಬಳಗದ ವತಿಯಿಂದ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗಿರುವ ವಿಶ್ವಾಸ ಟ್ರೋಪಿ-2026 ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಅವರ ಸಹೋದರ ಅಶ್ವತ್ ವೈದ್ಯ ಅವರು ಚಾಲನೆ ನೀಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕ್ರೀಡಾಭಿಮಾನಿಗಳ ಹರ್ಷೋದ್ಗಾರದ ನಡುವೆ ನಡೆದ ಕಾರ್ಯಕ್ರಮ ಯುವಕರಲ್ಲಿ ಹೊಸ ಉತ್ಸಾಹ ಮೂಡಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ ವೈದ್ಯ ಅವರು, “ಕ್ರೀಡೆ ಯುವಕರ ಜೀವನದಲ್ಲಿ ಶಿಸ್ತು, ಏಕತೆ ಹಾಗೂ ಆರೋಗ್ಯಕರ ಮನೋಭಾವ ಬೆಳೆಸುವ ಪ್ರಮುಖ ಸಾಧನವಾಗಿದೆ. ವಿಶ್ವಾಸಣ್ಣಾ ಅಭಿಮಾನಿ ಬಳಗವು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿಯೂ ಐಪಿಎಲ್ ಮಾದರಿಯ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಸಂಸ್ಕೃತಿ ಬೆಳೆಸುತ್ತಿರುವುದು ಸಂತಸದ ವಿಷಯ” ಎಂದು ಹೇಳಿದರು.
ಪ್ರಕಾಶ ವಾಲಿ ಮಾತನಾಡಿ “ಯುವಕರು ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಗಳಲ್ಲಿಯೂ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ” ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಕರವೇ ಅಧ್ಯಕ್ಷ ರಫೀಕ್ ಡಿಕೆ, ಮಲಿಕಸಾಬ್ ಬಾಗವಾನ್, ರಮೇಶ ದೇವರಡ್ಡಿ, ನಿಖಿಲ ಪಾಟೀಲ, ಹಣಮಂತ ಹಾರುಗೊಪ್ಪ, ಸಲೀಂ ಜಮಾದಾರ, ಸುರೇಶ ಭಜಂತ್ರಿ, ರಾಜು ಬಿರ್ಜಿ, ಸಮೀರ ನದಾಫ್, ರಫೀಕ್ ದಿಲಾವರನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 