ವಿಶ್ವಕರ್ಮ ಜಯಂತಿ ಆಚರಣೆ
Vishwakarma Jayanti celebration: Talikoti News
ತಾಳಿಕೋಟಿ 18: ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಗುಂಡೂರಾವ್ ಧನಪಾಲ ಅವರು ಮಾತನಾಡಿ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ವಿಶೇಷ ಕಲೆಯ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ವಿಶ್ವಕರ್ಮ ಸಮಾಜ ದವರಾಗಿದ್ದಾರೆ. ವಿಶ್ವಕರ್ಮ ಅವರು ಜಗತ್ತಿನ ಸೃಷ್ಟಿಗೆ ಕಾರಣರಾದವರು ಇಂತಹ ಮಹಾನ್ ದಾರ್ಶನಿಕರ ಜಯಂತಿ ಆಚರಿಸುವುದರ ಜೊತೆಗೆ ಅವರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು. ತಹಸೀಲ್ದಾರ ಡಾ.ವಿನಯಾ ಹೂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಜೆ.ಆರ್.ಜೈನಾಪೂರ, ಪುರಸಭೆ ಕಂದಾಯ ಅಧಿಕಾರಿ ಅಮರಣ್ಣವರ, ಸಮಾಜದ ಗಣ್ಯರಾದ ಆರ್ ಆರ್ ಬಡಿಗೇರ, ಮನೋಹರ ಪತ್ತಾರ, ಪ್ರಭಾಕರ ಬಡಿಗೇರ,ಈರಣ್ಣ ವಿಶ್ವಕರ್ಮ,ನಾಗಣ್ಣ ಹಂಚಲಿ, ಅಶೋಕ ಪತ್ತಾರ, ಪ್ರಭು ವಿಶ್ವಕರ್ಮ, ಮೌನೇಶ ಗುತ್ಯಾಳ, ಪ್ರಕಾಶ ಸಾಸನೂರ, ದಶರಥ ಬಂಡೇಕಾರ, ವಿವೇಕ ಪತ್ತಾರ, ಸುರೇಶ ಸೋಮನಾಳ, ಸೋಮು ಪತ್ತಾರ, ಲಕ್ಷ್ಮಿಕಾಂತ ಬಡಿಗೇರ ಹಾಗೂ ಸಿಬ್ಬಂದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 