ಶನಿವಾರ ಸುರೀದ ಮಳೆಗೆ ಧರೆಗುರುಳಿದ ಡ್ರ್ಯಾಗನ್ ಗಿಡಗಳು ಹಾಗೂ ಕಂಬಗಳು ವಿಕ್ಷೀಸುತ್ತಿರುವ ಗ್ರಾಮದ ಮುಖಂಡರು : ಲಕ್ಷ್ಮಣ ಹಿರೇಕುರಬರ

ಶನಿವಾರ ಸುರೀದ ಮಳೆಗೆ ಧರೆಗುರುಳಿದ ಡ್ರ್ಯಾಗನ್ ಗಿಡಗಳು ಹಾಗೂ ಕಂಬಗಳು ವಿಕ್ಷೀಸುತ್ತಿರುವ ಗ್ರಾಮದ ಮುಖಂಡರು : ಲಕ್ಷ್ಮಣ ಹಿರೇಕುರಬರ Village leaders are looking for dragon trees and pillars that were uprooted by the rains on Saturday

ಲೋಕದರ್ಶನ ವರದಿ 

           ತಾಂಬಾ 25 : ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಶೇ.85ರಷ್ಟು ಪ್ರತಿಶತ ರೈತರು ಕೃಷಿ ಆಧಾರಿತ ಬದುಕು ಸಾಗಿಸುತ್ತಿದ್ದಾರೆ ಆದರೆ ನಿಸರ್ಗದ ಹೊಡೆತಕ್ಕೆ ಸಿಲುಕಿ ರೈತರ ಬದುಕು ಇ0ದು ಮತ್ತಷ್ಟು ದುಸ್ಥರವಾಗಿದೆ. ವಾತವರಣ ಏರು ಪೇರಾಗಿ ತಾಂಬಾ ಗ್ರಾಮದಲ್ಲಿ ರಭಸದ ಮಳೆ ಬೀರುಗಾಳಿಗೆ 2ಎಕರೆ ಡ್ರಾಗನ್ ಗಿಡಗಳು ಕಂಬಸಹಿತವಾಗಿ ನೆಲಕ್ಕುರಳಿವೆ. ಹತ್ತು ವರ್ಷದಿಂದ ಕುಸಿಗೆ ಜೋಪಾನ ಮಾಡಿದಂತೆ ಮಾಡಿಕೊಂಡು ಬಂದಿರುವೆ ಇವತ್ತು ಬೀರುಗಾಳಿಗೆ ಸಿಲುಕಿ ನನ್ನ ಬದುಕು ಬೀದಿಗೆ ಬಂದತ್ತಾಗಿದೆ ಎಂದು ರೈತ ಮಹಿಳೆ ಕಸ್ತೂರಿಬಾಯಿ ಈರಣ್ಣ ತೆಗ್ಗೆಳ್ಳಿ(ಪಾಟೀಲ) ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ. 

ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಿನ್ನೆ ಹೇಚ್ಚು ಕಾಲ ರಭಸದ ಮಳೆ ಬೀರುಗಾಳಿ ಸಮೇತ ಸುರಿದ ಮಳೆಯಿಂದ ರೈತರಿಗೆ ಹಾನಿ ಆಗಿದೆ. ಸುದ್ದಿ ತಿಳಿದ ಗ್ರಾಮದ ಮಾಜಿ ತಾಪಂ ಸದಸ್ಯ ಪ್ರಕಾಶ ಮುಂಜಿ. ಮಾಜಿ ಗ್ರಾಪಂ ಅದ್ಯಕ್ಷ ರಜಾಕ ಚಿಕ್ಕಗಸಿ, ಗ್ರಾಪಂ ಸದಸ್ಯರಾದ ಪರಸು ಬೀಸನಾಳ ಸ್ಥಳಕ್ಕೆ ಬೇಟಿನಿಡಿ ರೈತ ಮಹಿಳೆಗೆ ಶಾಂತವನ ಹೇಳಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪ್ರಕೃತಿ ವಿಕೋಪ ದಡಿ ಹಾನಿಯಾದ ರೈತರಿಗೆ ಪರಿಹಾರ ನೀಡಬೆಕೆಂದು ಹೇಳಿದರು. 

ಮಳೆಯಿಂದಾಗಿ ಧನಗಳ ಶೇಡ್‌ಗಳು ಹಾರಿಹೊಗಿವೆ ಅಲ್ಲಿಯ ಪತ್ರಾಸ್‌ಗಳು ವಿದ್ಯುತ್ ಕಂಬದ ತಂತಿಯ ಮೇಲೆ ಬಿದ್ದು ಹೋಗಿವೆ ಅನೆಕ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಹಣ್ಣು ಹೇಸರುವಾಸಿಯಾಗಿದೆ ಸುಗರ್ ಇರುವ ಜನರು ಇದರ ಹಣ್ಣುಗಳು ಸೇವಿಸುತ್ತಾರೆ. ಈ ಭಾಗದ ರೈತರ ಪಾಲಿಗೆ ಮೇಘರಾಜನ ಅವಾಂತರದಿಂದ ಭಾರಿ ಗಾಳಿ, ಮಳೆಯಿಂದ ಹಾನಿಯಾಗಿದೆ ಈ ಹಣ್ಣಿನಿಂದಲೆ ಜೀವನ ಸಾಗಿಸುತ್ತಿರುವ ರೈತ ಮಹಿಳೆಗೆ ಪರಿಹಾರ ಕಲ್ಪಿಸಬೇಕೆಂದು ಮಾಜಿ ತಾಪಂ ಸದಸ್ಯ ಪ್ರಕಾಶ ಮುಂಜಿ ಮನವಿ ಮಾಡಿದ್ದಾರೆ.